News Karnataka Kannada
Monday, April 22 2024
Cricket
ವಿದೇಶ

ವಾರದಲ್ಲಿ ಮೂರು ದಿನ ಆಫೀಸ್ ಗೆ ಬನ್ನಿ: ಆ್ಯಪಲ್ ಕಂಪನಿ

Photo Credit :

ವಾರದಲ್ಲಿ ಮೂರು ದಿನ ಆಫೀಸ್ ಗೆ ಬನ್ನಿ: ಆ್ಯಪಲ್ ಕಂಪನಿ

ಕ್ಯಾಲಿಫೋರ್ನಿಯಾ: ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿತ್ತು. ಪ್ರತಿಷ್ಠಿತ ಆಯಪಲ್ ಕಂಪನಿ ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡಿ ವರ್ಷಗಳೇ ಉರುಳಿವೆ. ಇದೀಗ ಮತ್ತೆ ಕಚೇರಿಯಲ್ಲಿ ಕೆಲಸ ಮಾಡಲು ಆಯಪಲ್ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

ಸೆಪ್ಟೆಂಬರ್ ತಿಂಗಳಿನಿಂದ ವಾರದಲ್ಲಿ 3 ದಿನ ಆಯಪಲ್ ಉದ್ಯೋಗಿಗಳು ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕು ಎಂದು ಆಯಪಲ್ ಸಿಇಒ ಟಿಮ್ ಕೂಕ್ ಇಮೇಲ್ ಕಳುಹಿಸಿದ್ದಾರೆ. ಸಾಂಕ್ರಾಮಿಕ ರೋಗದ ಕಾರಣ ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಕೈತಪ್ಪಿತು. ಆದರೆ ವರ್ಕ್ ಫ್ರಮ್ ಹೋಮ್‌ನಲ್ಲಿ ವಿಡಿಯೋ ಮೀಟಿಂಗ್ ನಮ್ಮ ಅಂತರವನ್ನು ಕಡಿಮೆ ಮಾಡಿದೆ ಎಂದು ಕುಕ್ ಹೇಳಿದ್ದಾರೆ.

ಹೆಚ್ಚಿನ ಉದ್ಯೋಗಿಗಳಿಗೆ ಸೋಮವಾರ, ಮಂಗಳವಾರ ಹಾಗೂ ಗುರವಾರ ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸಲಾಗುತ್ತದೆ. ಇನ್ನುಳಿದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕುಕ್ ಹೇಳಿದ್ದಾರೆ.

ಇದರ ನಡುವೆ ಆಯಪಲ್ ಉದ್ಯೋಗಿಗಳಿಗೆ ಮತ್ತೊಂದು ಸೌಲಭ್ಯ ನೀಡಿದೆ. ವರ್ಷದಲ್ಲಿ 2 ವಾರ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ನೀಡಿದೆ. ಈ ಮೂಲಕ ಕುಟುಂಬದ ಸದಸ್ಯರೊಂದಿಗೆ ಕಳೆಯಲು, ಕಚೇರಿಗೆ ಆಗಮಿಸುವ ಟ್ರಾಫಿಕ್ ಕಿರಿಕಿರಿಯಿಂದ ದೂರವಿರಲು ಅವಕಾಶ ಮಾಡಿಕೊಟ್ಟಿದೆ.

ವಾರಕ್ಕೆ 3 ದಿನ ಕಚೇರಿಯಿಂದ ಕೆಲಸ ಮಾಡವು ನಿರ್ಧಾರ ದಿಢೀರ್ ತೆಗೆದುಕೊಂಡಿಲ್ಲ. ಈ ಕುರಿತು ಎಲ್ಲಾ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಕಂಪನಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಉದ್ಯೋಗಿಗಳು ಕಚೇರಿಯ ಹಲವು ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಆದರೆ ಸೆಪ್ಟೆಂಬರ್ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ.

ವಾರಕ್ಕೆ 3 ದಿನ ಆಫೀಸ್‌ಗೆ ಬನ್ನಿ ಎಂಬ ಮೇಲ್‌ನಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕುಕ್ ಮನವಿ ಮಾಡಿದ್ದಾರೆ. ಲಸಿಕೆಯಿಂದ ಮತ್ತಷ್ಟು ಸುರಕ್ಷಿತ ಸಿಗಲಿದೆ. ಹೀಗಾಗಿ ಕಚೇರಿಗೆ ಆಗಮಿಸುವ ಮೊದಲು ಲಸಿಕೆ ಹಾಕಿಸಿ ಎಂದಿದ್ದಾರೆ.

ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಕುರಿತು ಆಯಪಲ್ ಹೆಚ್ಚು ಆಸಕ್ತಿ ತೋರಿಲ್ಲ. ಇತರ ಟೆಕ್ ಕಂಪನಿಗಳು ಈಗಾಗಲೇ ವರ್ಕ್ ಫ್ರಮ್ ಹೋಮ್‌ಗೆ ಹೆಚ್ಚಿನ ಆದ್ಯತೆ ನೀಡಿದೆ. ಗೂಗಲ್ ಶೇಕಡಾ 20 ರಷ್ಟು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದೆ. ಫೇಸ್‌ಬುಕ್ ಕೂಡ ವರ್ಕ್ ಫ್ರಮ್ ಹೋಮ್ ಮುಂದುವರಿಸಿದೆ. ಇಷ್ಟೇ ಅಲ್ಲ ವರ್ಕ್ ಫ್ರಮ್ ಹೋಮ್ ಭವಿಷ್ಯದ ಪದ್ಧತಿ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು