News Karnataka Kannada
Friday, April 19 2024
Cricket
ವಿದೇಶ

ವಾಯುಪಡೆಯ ಮಿಗ್​-21 ವಿಮಾನ ಪಂಜಾಬ್​ ಬಳಿ ಪತನ

Photo Credit :

ವಾಯುಪಡೆಯ ಮಿಗ್​-21 ವಿಮಾನ ಪಂಜಾಬ್​ ಬಳಿ ಪತನ

ನವದೆಹಲಿ: ಭಾರತೀಯ ವಾಯುಪಡೆಯ ಮಿಗ್​-21 ವಿಮಾನವು ಪಂಜಾಬ್​ನ ಮೊಗಾ ಬಳಿ ಶುಕ್ರವಾರ ನಸುಕಿನ ಜಾವ ಪತನಗೊಂಡಿರುವುದಾಗಿ ವಾಯುಸೇನಾಧಿಕಾರಿಗಳು ತಿಳಿಸಿದ್ದಾರೆ.ಪತನಕ್ಕೂ ಮುನ್ನ ಮಿಗ್​-21 ವಿಮಾನದ ಪೈಲಟ್ ವಿಮಾನದಿಂದ ಹೊರಗೆ ಜಿಗಿದಿರುವುದಾಗಿ ಐಎಎಫ್​ ಮೂಲಗಳು ತಿಳಿಸಿದ್ದು, ಶೋಧ ಕಾರ್ಯಾಚರಣೆ ಆರಂಭವಾಗಿರುವುದಾಗಿಯೂ ಮಾಹಿತಿ ನೀಡಿದೆ.
ಈ ಘಟನೆ ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ನಸುಕಿನ ಜಾವ 1 ಗಂಟೆಗೆ ನಡೆದಿದೆ. ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್​ ಗ್ರಾಮದಲ್ಲಿ ಐಎಎಫ್ ವಿಮಾನ​ ಪತನಗೊಂಡಿದೆ.
ಪತನಗೊಂಡ ಸಂದರ್ಭದಲ್ಲಿ ಐಎಎಫ್ ವಿಮಾನವು ವಾಡಿಕೆಯ ತರಬೇತಿಯಲ್ಲಿತ್ತು. ಪತನಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಐಎಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು