News Karnataka Kannada
Monday, April 15 2024
Cricket
ವಿದೇಶ

ವರ ಕುಡಿದು ಬಂದಿದ್ದಾನೆಂದು ಮದುವೆ ತಿರಸ್ಕರಿಸಿದ ಮದುಮಗಳು!!

Photo Credit :

ವರ ಕುಡಿದು ಬಂದಿದ್ದಾನೆಂದು ಮದುವೆ ತಿರಸ್ಕರಿಸಿದ ಮದುಮಗಳು!!

ಉತ್ತರ ಪ್ರದೇಶ: ವರ ಹಾಗೂ ಆತನ ಸಹಚರರು ಮದುವೆ ಮನೆಗೆ ಕುಡಿದ ಮತ್ತಿನಲ್ಲಿ ಬಂದರೆಂಬ ಕಾರಣಕ್ಕೆ 22-ವರ್ಷದ ಮದುಮಗಳೊಬ್ಬಳು ಮದುವೆಯನ್ನೇ ರದ್ದು ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.

ಪ್ರಯಾಗ್‌ರಾಜ್‌ನ ಪ್ರತಾಪ್‌ಘಡ ಪಟ್ಟಣದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುಮಗನ ಮೆರವಣಿಗೆಯಲ್ಲಿ ಬಂದ ಅಷ್ಟೂ ಜನರನ್ನು ಒತ್ತೆಯಾಗಿಟ್ಟುಕೊಂಡ ಹುಡುಗಿಯ ಮನೆಯವರು, ತಾವು ಕೊಟ್ಟಿದ್ದ ಉಡುಗೊರೆಗಳನ್ನೆಲ್ಲಾ ವಾಪಸ್ ಕೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಮದುವೆಗೆ ಬಂದಿದ್ದಲ್ಲದೇ ಅತಿಥಿಗಳ ಮುಂದೆ ‘ಜೈಮಾಲಾ’ ಸಮಾರಂಭದಲ್ಲಿ ನೃತ್ಯ ಮಾಡಲು ವಧುವಿಗೆ ವರ ಬಲವಂತ ಮಾಡಿದ್ದಾನೆ. ಇದಕ್ಕೆ ವಧು ಒಪ್ಪದೇ ಇದ್ದಾಗ ಮದುವೆ ಗಂಡು ರಂಪಾಟ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮದುವೆ ಹೆಣ್ಣು, ಮದುವೆಯನ್ನೇ ಕ್ಯಾನ್ಸಲ್ ಮಾಡಿ ಎಂದಿದ್ದಾಳೆ.

ಪೊಲೀಸರಿಗೆ ಕರೆ ಮಾಡಿದ ಮದುಮಗನ ಮನೆಮಂದಿ ಹುಡುಗಿಯ ಮನವೊಲಿಸಲು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಮದುಮಗಳು ಯಾವುದೇ ಕಾರಣಕ್ಕೂ ಸಮ್ಮತಿ ನೀಡಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು