News Karnataka Kannada
Tuesday, April 16 2024
Cricket
ವಿದೇಶ

ಲಾಕ್‌ ಡೌನ್‌ ಸಮಯದಲ್ಲಿ ರಸಗುಲ್ಲಾ ಹಂಚುತಿದ್ದ ಇಬ್ಬರು ಪೋಲೀಸ್‌ ವಶಕ್ಕೆ

Photo Credit :

ಲಾಕ್‌ ಡೌನ್‌ ಸಮಯದಲ್ಲಿ ರಸಗುಲ್ಲಾ ಹಂಚುತಿದ್ದ ಇಬ್ಬರು ಪೋಲೀಸ್‌ ವಶಕ್ಕೆ

ಲಖನೌ: ಕರೊನಾ ನಿಯಮ ಮೀರಿ ರಸಗುಲ್ಲಾ ಹಂಚುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು 20 ಕೆಜಿ ರಸಗುಲ್ಲಾವನ್ನು ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯಿತಿ ಚುನಾವಣೆ ಫಲಿತಾಂಶದ ಬಳಿಕ ಜನಸಮೂಹಕ್ಕೆ ರಸಗುಲ್ಲಾ ಹಂಚುತ್ತಿದ್ದ ವೇಳೆ ಹಪೂರ್​ ಪೊಲೀಸರು ಆರೋಪಿಗಳು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗಳು ಕೋವಿಡ್ ಬಿಕ್ಕಟ್ಟಿನ ನಡುವೆಯೂ ನಡೆದಿವೆ. ಮೇ 2ರಂದು ನಡೆದ ಮತಎಣಿಕೆಯ ಬಳಿಕ ಯಾವುದೇ ವಿಜಯ ಮೆರವಣಿಗೆಗಳು ನಡೆಯದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳನ್ನು ಕೇಳಿತ್ತು.ಆದಾಗ್ಯೂ ಉತ್ತರ ಪ್ರದೇಶದ ಹಪೂರ್​ನಲ್ಲಿ ಪಂಚಾಯಿತಿ ಚುನಾವಣೆಯ ಗೆಲುವಿನ ಬಳಿಕ ಜನಜಂಗುಳಿಯ ಮಧ್ಯೆ ರಸಗುಲ್ಲಾ ಹಂಚಲಾಗುತ್ತಿತ್ತು. ಈ ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಹಪೂರ್​ ಪೊಲೀಸರು ಇಬ್ಬರನ್ನು ಬಂಧಿಸಿ ರಸಗುಲ್ಲಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸಿಆರ್​ಪಿಸಿ 144 ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೇ 2ರಂದು ನಡೆದ ಮತಎಣಿಕೆಯಲ್ಲಿ ತೃಣಮೂಲ ಕಾಂಗ್ರೆಸ್​ ಭರ್ಜರಿ ಜಯ ದಾಖಲಿಸಿದ ಬಳಿಕ ಕೋಲ್ಕತ್ತಾದಲ್ಲಿ ನೂರಾರು ಟಿಎಂಸಿ ಬೆಂಬಲಿಗರು ಪಕ್ಷದ ಕಚೇರಿಯ ಹೊರಗೆ ಧ್ವಜಗಳನ್ನು ಬೀಸಿ ಸಂಭ್ರಮಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ಡಿಎಂಕೆ ಬೆಂಬಲಿಗರು ಸಹ ಕೋವಿಡ್​ ಬಿಕ್ಕಟ್ಟಿನ ನಡುವೆಯೂ ಸಂಭ್ರಮಾಚರಣೆ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು