News Karnataka Kannada
Wednesday, April 17 2024
Cricket
ವಿದೇಶ

ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್‌ ಸಾಗಿಸಲು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ಹಡಗು ನಿಯೋಜಿಸಿದ ನೌಕಾಪಡೆ

Photo Credit :

ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್‌ ಸಾಗಿಸಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗು ನಿಯೋಜಿಸಿದ ನೌಕಾಪಡೆ

ಕೊಚ್ಚಿ : ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್​​ಗಳನ್ನು ಸಾಗಿಸಲು ಕೇರಳದ ಕೊಚ್ಚಿಯ ದಕ್ಷಿಣ ನೌಕಾಪಡೆ ಎರಡು ನೌಕಾ ಹಡಗುಗಳನ್ನು ನಿಯೋಜಿಸಿದ್ದು, ಇವು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ಹಡಗುಗಳೆಂದು ಹೇಳಿದೆ.ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಟಿಎಲ್ ಆಡಳಿತವನ್ನು ಬೆಂಬಲಿಸಲು ಆಕ್ಸಿಜನ್ ಸಿಲಿಂಡರ್‌ ಸಾಗಿಸಲು ಹಾಗೂ ಖಾಲಿ ಸಿಲಿಂಡರ್​ಗಳನ್ನು ಅಲ್ಲಿಂದ ಪಡೆಯಲು ಹಡಗುಗಳನ್ನು ನಿಯೋಜಿಸಿರುವುದಾಗಿ ಸದರ್ನ್ ನೇವಲ್ ಕಮಾಂಡ್ (ಎಸ್‌ಎನ್‌ಸಿ) ತಿಳಿಸಿದೆ. ದ್ವೀಪದಲ್ಲಿ ವೈದ್ಯಕೀಯ ನೆರವು ಹೆಚ್ಚಿಸಲು ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಗಿದ್ದು, ಪಿಪಿಇ, ಆರ್‌ಎಡಿಟಿ ಕಿಟ್‌ಗಳು, ಮಾಸ್ಕ್​​ಗಳು, ಕೈಗವಸುಗಳು, ನೆಬ್ಯುಲೈಸರ್‌ಗಳು ಸೇರಿದಂತೆ ಇತರ ವೈದ್ಯಕೀಯ ವಸ್ತುಗಳನ್ನು ಸರಬರಾಜುಗಳನ್ನು ಸಹ ನೌಕಾಪಡೆಯ ಮೂಲಕ ಒದಗಿಸಲಾಗಿದೆ.ಈಗಾಗಲೇ ಕೋವಿಡ್​ ಉಲ್ಬಣದಿಂದಾಗಿ ಹೆಚ್ಚು ಬೇಡಿಕೆಯಿರುವ ಆಮ್ಲಜನಕದ ಸಿಲಿಂಡರ್​ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲೆಂದು ಭಾರತೀಯ ರೈಲ್ವೆಯು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ವಿಶೇಷ ರೈಲು ಸೇವೆ ಆರಂಭಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು