News Karnataka Kannada
Thursday, April 18 2024
Cricket
ವಿದೇಶ

ರೋಹಿಣಿ ಸಿಂಧೂರಿ ವರ್ಗಾವಣೆಯ ಕಾರಣ ಬಹಿರಂಗಗೊಳಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

Photo Credit :

ರೋಹಿಣಿ ಸಿಂಧೂರಿ ವರ್ಗಾವಣೆಯ ಕಾರಣ ಬಹಿರಂಗಗೊಳಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಮೈಸೂರು, -ಜಿಲ್ಲಾಧಿಕಾರಿ ವರ್ಗಾವಣೆಯನ್ನು ಖಂಡಿಸಿ, ವರ್ಗಾವಣೆಗೆ ಕಾರಣ ಏನು ಎಂಬುದನ್ನು ಬಹಿರಂಗಗೊಳಿಸಿ ಎಂದು ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಭಾರೀ ಪಿತೂರಿ ಇದೆ.  ದೊಡ್ಡ ಜಾಲವೇ ಅಡಗಿದೆ. ಇವರು ಜಿಲ್ಲಾಧಿಕಾರಿಯಾಗಿದ್ದರೆ ಭೂ ಹಗರಣ ಹೊರಗೆ ಬರುತ್ತೆ ಅಕ್ರಮ ಮಾಡಿರುವವರು ಸಿಕ್ಕಿ ಬೀಳುತ್ತಾರೆ ಎಂದು ಸುಮಾರು 6 ತಿಂಗಳಿಂದಲೂ ವರ್ಗಾವಣೆಗೆ ಪಿತೂರಿ ಶುರುವಾಗಿದೆ. ರೋಹಿಣಿ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಎಂದಿಗೂ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ರೋಹಿಣಿ ಅವರನ್ನು ಯಾವ ಕಾರಣಕ್ಕೆ ವರ್ಗಾವಣೆ ಮಾಡಿದರು ಎಂದು ಸಿಎಂ ಬಿಎಸ್ವೈ ಅವರನ್ನು ನೇರವಾಗಿ ಕೇಳುತ್ತೇನೆ. ರೋಹಿಣಿ ಹಾಗೂ ಶಿಲ್ಪಾನಾಗ್ ಅವರ ಜಗಳದ ವಿಚಾರವಾಗಿ ಸಿಎಂ ಪರಿಶೀಲನೆ ಮಾಡಬೇಕಿತ್ತು. ಮುಖ್ಯ ಕಾರ್ಯದರ್ಶಿ ಅವರು ಮೈಸೂರಿಗೆ ಬಂದು ಇಬ್ಬರೊಂದಿಗೆ ಮಾತನಾಡಿದರು. ಏನು ವರದಿ ಕೊಟ್ಟಿದ್ದೀರಿ?  ಸರ್ಕಾರದಲ್ಲಿ ಅಧಿಕಾರಿಗಳಿಗೆ ಭದ್ರತೆ ಇಲ್ಲ. ಅಧಿಕಾರಿಗಳು ನಿಮ್ಮ ಏಜೆಂಟಾರಾಗಿ, ಗುಲಾಮರಾಗಿರಬೇಕಾ?ಎಂದು ಪ್ರಶ್ನಿಸಿದ ಅವರು, ಸಿಎಂ ಅವರೇ ನಿಮಗೆ ಏನು ವರದಿ ಬಂತು. ಯಾವ ವರದಿ ಆಧಾರದ ಮೇಲೆ ರೋಹಿಣಿ ಅವರನ್ನು ವರ್ಗಾವಣೆ ಮಾಡಿದ್ದೀರಿ? ಇದನ್ನು ಬಹಿರಂಗಗೊಳಿಸಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮಂತ್ರಿಗಳು, ಪಾರ್ಟಿಯವರು ಹೇಳಿದರೆ ಯಾರನ್ನು ಬೇಕಾದರೂ ವರ್ಗಾವಣೆ ಮಾಡುತ್ತೀರಾ? ಒಬ್ಬ ಐಎಎಸ್ ಅಧಿಕಾರಿಗೆ ಸರ್ಕಾರ ಕೊಟ್ಟಿರುವ ರಕ್ಷಣೆ ಏನು? ಎಂದು ಪ್ರಶ್ನೆ ಮಾಡಿದರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿದ್ದಾರೆ. ಆ ಡಿಸಿ ವರ್ಗಾವಣೆ ಮಾಡೋಲ್ಲ. ನಿಮಗೆ ಬೇಕಾದ ಡಿಸಿ ಇರಬಹುದು. ಬೇಡವಾದವರನ್ನು ವರ್ಗಾವಣೆ ಮಾಡಬಹುದು. ಇದು ಯಾವ ನೀತಿ. ಆಡಳಿತವೇ ಕೆಟ್ಟ ಸಂಪ್ರದಾಯವನ್ನು ಆರಂಭ ಮಾಡಿದೆ ಎಂದು ಆಪಾದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು