News Karnataka Kannada
Thursday, April 25 2024
ವಿದೇಶ

ರೈತರ ಬೆಳೆ ಖರೀದಿಗೆ ಮುಂದಾದ ನಟ ಉಪೇಂದ್ರ

Photo Credit :

ರೈತರ ಬೆಳೆ ಖರೀದಿಗೆ ಮುಂದಾದ ನಟ ಉಪೇಂದ್ರ

ಬೆಂಗಳೂರು: ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಸಿನಿ ಕಾರ್ಮಿಕರ ನೆರವಿಗೆ ನಿಂತಿದ್ದ ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಇದೀಗ ರೈತರು ಬೆಳೆದಿರುವ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡಲು ತಯಾರಿ ನಡೆಸಿದ್ದಾರೆ.
ಲಾಕ್‍ಡೌನ್ ನಿಂದ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಂದ ತರಕಾರಿ ಖರೀದಿಸಿ ಅವಶ್ಯಕತೆ ಇರುವವರಿಗೆ ಹಂಚಲು ಮುಂದಾಗಿದ್ದಾರೆ ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.
ರೈತರು ಹಂಚಿಕೊಳ್ಳಬೇಕಾದ ಮಾಹಿತಿ
1.ನೀವು ಬೆಳೆದ ಬೆಳೆ ಯಾವುದು ?
2.ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ ?
3.ಅದರ ಅಂತಿಮ ಬೆಲೆ ಎಷ್ಟು ?
4.ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು ? ಈ ವಿವರಗಳನ್ನು ದಯವಿಟ್ಟು ಕಳಿಸಿಕೊಡಿ.
5.ವಾಟ್ಸ್ಅಪ್ ನಂಬರ್ +91 98457 63396.
— Upendra (@nimmaupendra) May 15, 2021
ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಬೆಳೆಗಳನ್ನು ಎಲ್ಲಿ ಬೆಳದಿದ್ದಾರೊ ಅವರಿರುವ ಜಾಗಕ್ಕೆ ತೆರಳಿ ಅಲ್ಲಿಂದ ಸೂಕ್ತ ಬೆಲೆ ಖರೀದಿಸಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತೇವೆ. ಕರೆ ಮಾಡಿ ಎಂದು ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದಾರೆ. ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ….
ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ.
ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ )
Mbl no 9845763396— Upendra (@nimmaupendra) May 15, 2021
ಸಿನಿಮಾ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ನೀಡಿ ಮಾನವೀಯತೆ ಮೆರೆದಿದ್ದ ಉಪೇಂದ್ರ ಅವರು ಇದೀಗ ದೇಶದ ಬೆನ್ನೆಲುಬು ರೈತರ ಬೆನ್ನಿಗೆ ನಿಂತು ಅವರಿಗೆ ನ್ಯಾಯ ಒದಗಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಪೇಂದ್ರ ಅವರ ಈ ಕಾರ್ಯಕ್ಕೆ ಅನೇಕ ಸ್ಟಾರ್‍ಗಳು, ಅಭಿಮಾನಿಗಳು, ಜನ ಸಾಮಾನ್ಯರು ಸಹಾಯವನ್ನು ಮಾಡುತ್ತಿದ್ದಾರೆ. ಉಪೇಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು