News Karnataka Kannada
Tuesday, April 16 2024
Cricket
ವಿದೇಶ

ರಾಸಾಯನಶಾಸ್ತ್ರದಲ್ಲಿ ಕೇವಲ 24 ಅಂಕ! ಈಗ ಐಎಎಸ್ ಅಧಿಕಾರಿ

Photo Credit :

ರಾಸಾಯನಶಾಸ್ತ್ರದಲ್ಲಿ ಕೇವಲ 24 ಅಂಕ! ಈಗ ಐಎಎಸ್ ಅಧಿಕಾರಿ

ನವದೆಹಲಿ: ಬೋರ್ಡ್ ಪರೀಕ್ಷೆಯಲ್ಲಿ ಶೇ.99ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದರೆ ಮಾತ್ರ ಜೀವನ, ಇಲ್ಲವಾದಲ್ಲಿ ಜೀವನ ಕೊನೆಗೊಂಡಿದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಈ ಐಎಎಸ್ ಅಧಿಕಾರಿ ಮಾದರಿ.

ಸಿಬಿಎಸ್ ಇ 12ನೇ ತರಗತಿ ಫಲಿತಾಂಶವು ಬಿಡುಗಡೆ ಆಗಿದೆ ಮತ್ತು ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದ್ದೇವೆ ಎನ್ನುವ ಆತಂಕ ಹಾಗೂ ಒತ್ತಡಕ್ಕೆ ಸಿಲುಕಿದ್ದಾರೆ. ಆದರೆ ಜೀವನದಲ್ಲಿ ಸಾಧನೆ ಮಾಡಲು ಕೇವಲ ಅಂಕಗಳು ಮಾತ್ರ ಮಾನದಂಡವಲ್ಲವೆಂದು ಐಎಎಸ್ ಅಧಿಕಾರಿಯೊಬ್ಬರು ತನ್ನ ಮಾರ್ಕ್ ಕಾರ್ಡ್ ನ್ನು ಟ್ವೀಟ್ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ.

ಐಎಎಸ್ ಅಧಿಕಾರಿ ನಿತಿನ್ ಸಾಂಗ್ವನ್ ಅವರು 2002ರಲ್ಲಿ ತಾನು ಸಿಬಿಎಸ್ ಇಯ 12ನೇ ತರಗತಿಯಲ್ಲಿ ಪಡೆದ ಅಂಕಗಳ ಪಟ್ಟಿಯನ್ನು ಶೇರ್ ಮಾಡಿರುವರು. ಅವರು ಆ ಸಮಯದಲ್ಲಿ ರಸಾಯನಶಾಸ್ತ್ರದಲ್ಲಿ   ಅವರು ಕೇವಲ 24 ಅಂಕಗಳನ್ನು ಪಡೆದಿದ್ದರು. ಆದರೂ ಇಂದು ದೊಡ್ಡ ಹುದ್ದೆಯಲ್ಲಿರುವರು.

ಸಾಂಗ್ವನ್ ಅವರು ಅಹ್ಮದಾಬಾದ್ ಮಹಾನಗರ ಪಾಲಿಕೆಯಲ್ಲಿ ಮಹಾನಗರ ಪಾಲಿಕೆ ಕಮಿಷನರ್ ಆಗಿರುವರು. ಕೇವಲ ಅಂಕಗಳು ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ ಎಂದು ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪ್ರಯತ್ನಿಸಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು