News Karnataka Kannada
Wednesday, April 24 2024
Cricket
ವಿದೇಶ

ರಾಜ್ಯಸಭೆಯಲ್ಲಿ ಗದ್ದಲ: 8 ಸಂಸದರು ಒಂದು ವಾರ ಅಮಾನತು

Photo Credit :

ರಾಜ್ಯಸಭೆಯಲ್ಲಿ ಗದ್ದಲ: 8 ಸಂಸದರು ಒಂದು ವಾರ ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಎಂಟು ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಲಾಗಿದೆ. ಈ ಸಂಸದರಿಗೆ ಸದನದಿಂದ ತೆರಳುವಂತೆ ಉಪ ರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಡೆರೆಕ್‌ ಒಬ್ರಿಯಾನ್‌, ಸಂಜಯ್ ಸಿಂಗ್ (ಎಎಪಿ), ರಾಜೀವ್ ಸಾತವ್ (ಕಾಂಗ್ರೆಸ್‌), ಕೆ.ಕೆ.ರಾಗೇಷ್‌ (ಸಿಪಿಐ), ಸಯ್ಯದ್ ನಾಸಿರ್ ಹುಸೇನ್, ರಿಪು ಬೋರಾ (ಕಾಂಗ್ರೆಸ್‌), ದೋಲಾ ಸೇನ್ (ಟಿಎಂಸಿ), ಎಳಮರಂ ಕರೀಂ (ಸಿಪಿಐಎಂ) ಅಮಾನತುಗೊಂಡಿದ್ದಾರೆ.

ಭಾನುವಾರ ಕೃಷಿ ಮಸೂದೆಗಳ ಮಂಡನೆ ವೇಳೆ ರಾಜ್ಯಸಭೆಯಲ್ಲಿ ಕೋಲಾಹಲ ನಿರ್ಮಾಣವಾಗಿತ್ತು. ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್‌ ಪ್ರಕಟಿಸಿದಾಗ ವಿರೋಧ ಪಕ್ಷಗಳ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದರು

ಸಭಾಪತಿ ಪೀಠದತ್ತ ನುಗ್ಗಿದ್ದ ಡೆರೆಕ್‌ ಒಬ್ರಿಯಾನ್, ರೂಲ್‌ ಬುಕ್‌ ಎತ್ತಿಕೊಂಡು ಹರಿಯಲು ಯತ್ನಿಸಿದ್ದರು. ಅವರನ್ನು ಸೇರಿಕೊಂಡ ವಿರೋಧ ಪಕ್ಷಗಳ ಸದಸ್ಯರು ಕೈಗೆ ಸಿಕ್ಕ ಮೈಕ್ರೊಫೋನ್‌ಗಳನ್ನು ಮುರಿದು ಹಾಕಿದ್ದರು. ಕಾಗದದ ಚೂರುಗಳನ್ನು ಹರಿದು ತೂರಿದ್ದರು. ಟೇಬಲ್‌ಗಳ ಮೇಲೆ ಹತ್ತಿ ನಿಂತು ಘೋಷಣೆಗಳನ್ನು ಕೂಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು