News Karnataka Kannada
Thursday, April 25 2024
Cricket
ವಿದೇಶ

ರಾಜ್ಯದಲ್ಲಿ ಹೆಚ್ಚಾದ ಕೊರೋನಾ ಸೋಂಕು, ಒಂದೇ ದಿನದಲ್ಲಿ 373 ಮಂದಿ ಸಾವು!

Photo Credit :

ರಾಜ್ಯದಲ್ಲಿ ಹೆಚ್ಚಾದ ಕೊರೋನಾ ಸೋಂಕು, ಒಂದೇ ದಿನದಲ್ಲಿ 373 ಮಂದಿ ಸಾವು!

ಬೆಂಗಳೂರು: ರಾಜ್ಯದಲ್ಲಿ ಕಳೆದೆರೆಡು ದಿನಗಳಿಂದ 40 ಸಾವಿರಕ್ಕಿಂತ ಕಡಿಮೆ ಬರುತ್ತಿದ್ದ ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 40 ಸಾವಿರ ದಾಟಿದ್ದು, 41,779 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 21,30,267ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡಿದೆ. ಇಂದು ಒಂದೇ ದಿನ ಹೆಮ್ಮಾರಿ ಸೋಂಕಿಗೆ 373 ಬಲಿಯಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಕೊರೋನಾಗೆ 21,085 ಮಂದಿ ಮೃತಪಟ್ಟಿದ್ದಾರೆ. ಇಂದು ಒಂದೇ ದಿನ 35,879 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ಇಂದೂ ಬರೋಬ್ಬರಿ 14,316 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 1029312ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರು ನಗರವೊಂದರಲ್ಲೇ ಸೋಂಕಿಗೆ 121 ಮಂದಿ ಇಂದು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೆ ಡೆಡ್ಲಿ ವೈರಸ್​ನಿಂದ 9,246 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿಂದು ಸೋಂಕಿನಿಂದ 12,898 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3,60,862 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಂತರದ ಸ್ಥಾನದಲ್ಲಿ ಬಳ್ಳಾರಿ ಜಿಲ್ಲೆಯಿದ್ದು, ಒಂದೇ ದಿನ 26 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ 21, ಹಾಸನದಲ್ಲಿ 20, ತುಮಕೂರಿನಲ್ಲಿ 19, ಉತ್ತರ ಕನ್ನಡದಲ್ಲಿ 15, ಬಾಗಲಕೋಟೆಯಲ್ಲಿ 14, ಮಂಡ್ಯ-ರಾಮನಗರದಲ್ಲಿ ತಲಾ 13 ಮಂದಿ, ಮೈಸೂರು-ಬೆಂಗಳೂರು ಗ್ರಾಮಾಂತರದಲ್ಲಿ ತಲಾ 12 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.ಇನ್ನು ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂತರ ಸ್ಥಾನ ತುಮಕೂರು ಜಿಲ್ಲೆಯಿದ್ದು, 2668 ಮಂದಿ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಬಂದಿದೆ. ಬಳ್ಳಾರಿಯಲ್ಲಿ 2421 , ಮೈಸೂರಲ್ಲಿ 2340 , ಬೆಳಗಾವಿಯಲ್ಲಿ 1592, ಮಂಡ್ಯದಲ್ಲಿ 1385, ಹಾಸನದಲ್ಲಿ 1339, ದಕ್ಷಿಣ ಕನ್ನಡದಲ್ಲಿ 1215, ರಾಯಚೂರಿನಲ್ಲಿ 1063, ಉಡುಪಿಯಲ್ಲಿ 1219 ಪ್ರಕರಣಗಳು ದಾಖಲಾಗಿವೆ. ಇನ್ನುಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.
ದೇಶಾದ್ಯಂತ ಗುರುವಾರ 3,43,144 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,44,776 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,40,46,809ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಗುರುವಾರ 4,000 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,62,317ಕ್ಕೆ ಏರಿಕೆ ಆಗಿದೆ. ಇನ್ನಾದರೂ ಸಾರ್ವಜನಿಕರು ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕಿದೆ. ಮಾಸ್ಕ್​​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿ ತಗುಲದಂತೆ ಎಚ್ಚರಿಕೆ ವಹಿಸಬೇಕಿದೆ. ಇದರ ಜೊತೆಗೆ ಧೈರ್ಯದಿಂದ ಮುಂದೆ ಬಂದು ಕೊರೋನಾ ಲಸಿಕೆ ಪಡೆದು ಕೊರೋನಾ ವಿರುದ್ಧ ಒಂದಾಗಿ ಹೋರಾಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು