News Karnataka Kannada
Tuesday, April 16 2024
Cricket
ವಿದೇಶ

ರಾಜ್ಯದಲ್ಲಿ ಗಣನೀಯವಾಗಿ ಕರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ

Photo Credit :

ರಾಜ್ಯದಲ್ಲಿ ಗಣನೀಯವಾಗಿ ಕರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ

ಬೆಂಗಳೂರು : ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ . ಇಂದು ( ಜೂ .5 ) 13,800 ಮಂದಿಗೆ ಸೋಂಕು ತಗುಲಿದ್ದು , 365 ಜನ ಸೋಂಕಿತರು ಸಾವನ್ನಪ್ಪಿದ್ದಾರೆ .

 

 ಈ ಅಂಕಿಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 26,83,314 ಕ್ಕೆ ಏರಿದ್ದು, ಸಾವಿನ ಸಂಖ್ಯೆ 31,260 ಕ್ಕೆ ತಲುಪಿದೆ . ಇಂದು ರಾಜ್ಯದಲ್ಲಿ 25,346 ಮಂದಿ ಗುಣಮುಖರಾಗಿದ್ದು , ಒಟ್ಟು ಗುಣಮುಖರಾದವರ ಸಂಖ್ಯೆ 23,83,758 ಕ್ಕೆ ತಲುಪಿದೆ . ಒಟ್ಟು 2,68,275 ಸಕ್ರಿಯ ಪ್ರಕರಣಗಳಿವೆ . ಬೆಂಗಳೂರಿನಲ್ಲಿ 2686 ಪ್ರಕರಣ ದಾಖಲಾಗಿದ್ದು , 206 ಮಂದಿ , ಸಾವನ್ನಪ್ಪಿದ್ದಾರೆ .

 

ಇನ್ನು ಇತರೆ ಜಿಲ್ಲೆಗಳ ಸೋಂಕಿತರ ಪಟ್ಟಿಯ ಅಂಕಿಅಂಶ ನೋಡಿದರೆ, ಬಾಗಲಕೋಟೆ 175 , ಬಳ್ಳಾರಿ 345 , ಬೆಳಗಾವಿ 847 , ಬೆಂಗಳೂರು ಗ್ರಾಮಾಂತರ 326 , ಬೆಂಗಳೂರು ನಗರ 2,686 , ಬೀದರ್ 23 , ಚಾಮರಾಜನಗರ 340 , ಚಿಕ್ಕಬಳ್ಳಾಪುರ 432 , ಚಿಕ್ಕಮಗಳೂರು 378 , ಚಿತ್ರದುರ್ಗ 449 , ದಕ್ಷಿಣ ಕನ್ನಡ 714 , ದಾವಣಗೆರೆ 529 , ಧಾರವಾಡ 247 , ಗದಗ 152 , ಹಾಸನ 568 , ಹಾವೇರಿ 88 , ಕಲಬುರಗಿ 69 , ಕೊಡಗು 255 , ಕೋಲಾರ 424 , ಕೊಪ್ಪಳ 279 , ಮಂಡ್ಯ 562 , ಮೈಸೂರು 1155 , ರಾಯಚೂರು 110 , ರಾಮನಗರ 57 , ಶಿವಮೊಗ್ಗ 710 , ತುಮಕೂರು 695 , ಉಡುಪಿ 552 , ಉತ್ತರ ಕನ್ನಡ 325 , ವಿಜಯಪುರ 254 , ಯಾದಗಿರಿ 54 ಹೊಸ ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು