News Karnataka Kannada
Thursday, April 25 2024
Cricket
ವಿದೇಶ

ರಾಜೀವ್ ಗಾಂಧಿ ಹಾಥರಸ್ ಭೇಟಿ: ಸ್ಮೃತಿ ಇರಾನಿ ಕಟು ಟೀಕೆ

Photo Credit :

ರಾಜೀವ್ ಗಾಂಧಿ ಹಾಥರಸ್ ಭೇಟಿ: ಸ್ಮೃತಿ ಇರಾನಿ ಕಟು ಟೀಕೆ

ನವದೆಹಲಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಕೀಯ ತಂತ್ರಗಳ ಉದ್ದೇಶವನ್ನು ಇರಿಸಿಕೊಂಡು ಹಾಥರಸ್ ನ ಸಂತ್ರಸ್ತೆಯ ಮನೆಗೆ ಭೇಟಿ ನಿಂತಿದ್ದಾರೆ. ಅವರಿಗೆ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಉದ್ದೇಶ ಖಂಡಿತ ಅವರಿಗೆ ಇರಲಾರದು ‘ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿಯ ಹಾಥರಸ್‌ ಭೇಟಿಯ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ರಾಜತಂತ್ರಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಭೇಟಿಯ ಹಿಂದಿನ ಉದ್ದೇಶವೂ ಖಂಡಿತ ಯಾವುದು ರಾಜಕೀಯ ಕೈಚಳಕವೇ ಆಗಿರುತ್ತದೆ. ಅವರ ಈ ರಾಜಕೀಯ ನೀತಿಯಿಂದಲೇ 2019ರಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಕಂಡಿದ್ದು. ಈಗ ಪುನಃ ಅಂತಹದೇ ಯಾವುದು ನೀತಿಯನ್ನು ಇಲ್ಲಿ ಪ್ರಯೋಗಿಸುತ್ತಿದ್ದಾರೆ ಇದರ ವಿನಃ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಲ್ಲ ‘ ಎಂದು ಹೇಳಿದ್ದಾರೆ.

ಗುರುವಾರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಹಾಥರಸ್‌ಗೆ ತೆರಳಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದಿದ್ದರು. ರಾಹುಲ್ , ಪ್ರಿಯಾಂಕಾ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಕೋವಿಡ್-19 ಸಾಂಕ್ರಾಮಿಕದ ಸಂದರ್ಭ ಸಾರ್ವಜನಿಕರ ಓಡಾಟಕ್ಕಿರುವ ನಿರ್ಬಂಧ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು