News Karnataka Kannada
Thursday, April 25 2024
ವಿದೇಶ

ರಾಜಸ್ಥಾನದ ಚಂಬಲ್ ನದಿಯಲ್ಲಿ ದೋಣಿ ಅವಘಡ: 12 ಮಂದಿ ನಾಪತ್ತೆ

Photo Credit :

ರಾಜಸ್ಥಾನದ ಚಂಬಲ್ ನದಿಯಲ್ಲಿ ದೋಣಿ ಅವಘಡ: 12 ಮಂದಿ ನಾಪತ್ತೆ

ರಾಜಸ್ಥಾನ: ರಾಜಸ್ಥಾನದ ಚಂಬಲ್ ನದಿಯಲ್ಲಿ ಬುಧವಾರ ಬೆಳಗ್ಗೆ ದೋಣಿ ಮುಳುಗಿದ ಘಟನೆಯು ಸಂಭವಿಸಿದೆ.

40 ಮಂದಿ ಭಕ್ತರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿ ಮಕ್ಕಳು ಮಹಿಳೆಯರು ಸೇರಿದಂತೆ 12 ಮಂದಿ ನಾಪತ್ತೆಯಾಗಿದ್ದಾರೆ. 24ಕ್ಕೂ ಹೆಚ್ಚು ಮಂದಿ ಈಜಿ ದಡ ಸೇರಿ ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ಜನರು ದೋಣಿ ಏರಿದ್ದು, ದೋಣಿ ಮುಳುಗಲು ಮೂಲ ಕಾರಣ ಎನ್ನಲಾಗುತ್ತಿದೆ. ನದಿಯ ಮಧ್ಯೆ ತಲುಪುವಾಗ ದೋಣಿ ಮುಳುಗಿದೆ ಪರಿಣಾಮ ದೋಣಿಯಲ್ಲಿದವರು ನೀರಿ ಪಾಲಾಗಿದ್ದಾರೆ.

ಸ್ಥಳೀಯರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದು, ಹಲವರನ್ನು ದಡ ಸೇರಿಸಲು ಯಶಸ್ವಿಯಾಗಿದ್ದಾರೆ. ಇನ್ನು ಕೆಲವರು ಈಜಿಕೊಂಡು ದಡ ಸೇರಿದ್ದರು. ಆದರೆ ಮಕ್ಕಳು ಹಾಗೂ ಮಹಿಳೆಯರು ಸೇರಿ ಸುಮಾರು ಹನ್ನೆರಡು ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಅವರ ಶೋಧಕಾರ್ಯ ನಡೆಯುತ್ತಿದ್ದು  ಎಸ್ ಡಿಆರ್ ಎಫ್ ತಂಡ ಕಾರ್ಯಾಚರಣೆ ತೊಡಗಿಕೊಂಡಿದೆ.

ಸಾವಿನ ಕುರಿತು ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಶರದ್ ಚೌಧರಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು