News Karnataka Kannada
Sunday, April 14 2024
Cricket
ವಿದೇಶ

ರಾಜಕಾರಣಿಗಳ ಸಂದೇಶಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಕಡಿತಗೊಳಿಸಲು ಚಿಂತಿಸುತ್ತಿರುವ ಫೇಸ್ ಬುಕ್

Photo Credit :

ರಾಜಕಾರಣಿಗಳ ಸಂದೇಶಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಕಡಿತಗೊಳಿಸಲು ಚಿಂತಿಸುತ್ತಿರುವ ಫೇಸ್ ಬುಕ್

ಅಮೆರಿಕ : ರಾಜಕಾರಣಿಗಳು ತಮ್ಮ ಸಂದೇಶಗಳನ್ನು ನೀಡಲು ಸಾಮಾಜಿಕ ಜಾಲತಾಣಗಳ ಫೇಸ್ಬುಕ್, ಟ್ವಿಟರ್ ಇತ್ಯಾದಿ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ರಾಜಕಾರಣಿಗಳ ಸಂದೇಶಗಳಿಗೆ ನೀಡಲಾಗುತ್ತಿರುವ ಆದ್ಯತೆಯನ್ನು ಕೊನೆಗೊಳಿಸಲು ಫೇಸ್‌ಬುಕ್ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ . 

 

ರಾಜಕಾರಣಿಗಳ ಸಂದೇಶಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ಕೊನೆಗೊಳಿಸುವ ಬಗ್ಗೆ ಫೇಸ್‌ಬುಕ್ ಕಂಪನಿ ಪರಿಶೀಲಿಸುತ್ತಿದೆ ಎಂದು ‘ ವರ್ಜ್ ‘ ವರದಿ ಮಾಡಿದೆ . ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಫೇಸ್‌ಬುಕ್‌ನಿಂದ ಅಮಾನತು ಮಾಡಿರುವ ವಿಷಯದಲ್ಲಿ ಕಂಪನಿಯ ಕಣ್ಣಾವಲು ಸಮಿತಿಯು ಮಾಡಿರುವ ಶಿಫಾರಸುಗಳ ಪರಿಶೀಲನೆಯ ಬಳಿಕ ಫೇಸ್‌ಬುಕ್ ಇದಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ . 

 

ಈ ನಿಯಮಕ್ಕೆ ಮುಖ್ಯ ಕಾರಣ, ನಿಯಮಗಳು ಎಲ್ಲಾ ಬಳಕೆದಾರರಿಗೆ ಸಮಾನವಾಗಿ ಅನ್ವಯಿಸಬೇಕು ಎಂದು. ಅಷ್ಟೇ ಅಲ್ಲದೆ, ಸಂದೇಶವು ತೆಗೆದುಹಾಕಲು ಸಾಧ್ಯವಾಗದಷ್ಟು ಸುದ್ದಿ ಮೌಲ್ಯವನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸುವಾಗ ಅಥವಾ ಪ್ರಭಾವಿ ಖಾತೆಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಾಗ ಅನುಸರಿಸಲಾಗುವ ನಿಯಮಗಳ ಬಗ್ಗೆ ಬಳಕೆದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಫೇಸ್‌ಬುಕ್ ಕಣ್ಣಾವಲು ಸಮಿತಿ ಶಿಫಾರಸು ಮಾಡಿದೆ . 

 

ಪ್ರಸ್ತುತ ಫೇಸ್‌ಬುಕ್ ಮತ್ತು ಟ್ವಿಟರ್‌ನ ಹಾಲಿ ನಿಯಮಗಳು ಸಾಮಾನ್ಯ ಬಳಕೆದಾರರಿಗಿಂತ ಜಾಗತಿಕ ನಾಯಕರು , ಚುನಾಯಿತ ಅಧಿಕಾರಿಗಳು ಮತ್ತು ರಾಜಕೀಯ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಪ್ರತಿಪಾದಿಸಲಾಗಿದ್ದು, ಈ ಮನಸ್ಥಿತಿಯನ್ನು ತೆಗೆದುಹಾಕಲು ಫೇಸ್ ಬುಕ್ ಆಲೋಚಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು