News Karnataka Kannada
Thursday, April 25 2024
ವಿದೇಶ

ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿ ಉಳಿದ ತಾಳೆ ಎಣ್ಣೆ

Untitled 159
Photo Credit :

 ಮುಂಬೈ: ಇಂಡೊನೇಷ್ಯಾ ದೇಶವು ತಾಳೆ ಎಣ್ಣೆ ರಫ್ತನ್ನು ‌ನಿಷೇಧಿಸಿರುವ ಕಾರಣದಿಂದಾಗಿ, ಭಾರತಕ್ಕೆ ಬರಬೇಕಿರುವ 2.90 ಲಕ್ಷ ಟನ್‌ ತಾಳೆ ಎಣ್ಣೆಯು ಬಂದರುಗಳಲ್ಲಿಯೇ ಉಳಿಯುವಂತಾಗಿದೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.

16 ಸಾವಿರ ಟನ್‌ನಷ್ಟು ತಾಳೆ ಎಣ್ಣೆ ಇರುವ ಹಡಗು ಇಂಡೊನೇಷ್ಯಾದ ಕುಮೈ ಬಂದರಿನಲ್ಲಿ ಸಿಕ್ಕಿಕೊಂಡಿದೆ ಎಂದು ಜೆಮಿನಿ ಎಡಿಬಲ್ಸ್‌ ಆಯಂಡ್‌ ಫ್ಯಾಟ್ಸ್‌ ಇಂಡಿಯಾ ಪ‍್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಚೌಧರಿ ತಿಳಿಸಿದ್ದಾರೆ.

ಕಂಪನಿಯು ಪ್ರತಿ ತಿಂಗಳು ಇಂಡೊನೇಷ್ಯಾದಿಂದ 30 ಸಾವಿರ ಟನ್‌ ತಾಳೆ ಎಣ್ಣೆ ಖರೀದಿಸುತ್ತಿದೆ.

ಇಂಡೊನೇಷ್ಯಾದ ನಿರ್ಧಾರದಿಂದ ಭಾರತದಲ್ಲಿ ತಾಳೆ ಎಣ್ಣೆ ಕೊರತೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಭಾರತವು ತನ್ನ ಪ್ರತಿ ತಿಂಗಳ ದೇಶಿ ಬೇಡಿಕೆಯ ಅರ್ಧದಷ್ಟನ್ನು ಇಂಡೊನೇಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ.

ಕಂಪನಿಗಳು ಮಲೇಷ್ಯಾದ ತಾಳೆ ಎಣ್ಣೆ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಬೇಡಿಕೆ ಪೂರೈಸಲು ಆ ದೇಶಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸನ್‌ವಿನ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಮಲೇಷ್ಯಾದ ಮಾರಾಟಗಾರರು ಈಗಾಗಲೇ ಮಾಡಿಕೊಂಡಿರುವ ಪೂರೈಕೆ ಒಪ್ಪಂದ ಈಡೇರಿಸಲು ಬದ್ಧರಾಗಿದ್ದಾರೆ. ಹೊಸ ಬೇಡಿಕೆಯನ್ನು ಪೂರೈಸುವುದಿಲ್ಲ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು