News Karnataka Kannada
Saturday, April 20 2024
Cricket
ವಿದೇಶ

ಯುವ ಕೊರೋನ ಸೋಂಕಿತನಿಗೆ ಬೆಡ್ ನೀಡಿದ್ದ, ನಾರಾಯಣ ದಾಬಡ್ಕರ್ ನಿಧನ

Photo Credit :

ಯುವ ಕೊರೋನ ಸೋಂಕಿತನಿಗೆ ಬೆಡ್ ನೀಡಿದ್ದ, ನಾರಾಯಣ ದಾಬಡ್ಕರ್ ನಿಧನ

ಮುಂಬೈ: ತಮಗೆ ದೊರೆತಿದ್ದ ಹಾಸಿಗೆಯನ್ನು ತಮಗಿಂತ ಕಿರಿಯ ವ್ಯಕ್ತಿಗೆ ನೀಡಿ ಹಿರಿಯ ವ್ಯಕ್ತಿಯೊಬ್ಬರು ಜೀವ ತ್ಯಜಿಸಿರುವ ಮನ ಕಲಕುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು!! ನಾರಾಯಣ್‌ ದಾಬಡ್ಕರ್‌ (85) ಕೋವಿಡ್‌ ಸೋಂಕಿಗೆ ಬಲಿಯಾದ ಹಿರಿಯ ಜೀವ. ಇವರು ಕಳೆದ ಹಲವು ದಿನಗಳ ಹಿಂದೆ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಇವರಿಗೆ ನಾಗ್‌ಪುರ ಆಸ್ಪತ್ರೆಯಲ್ಲಿ ಬೆಡ್‌ ಸಹ ಸಿಕ್ಕಿತ್ತು. ಆದರೆ, 40 ವರ್ಷದ ಕೋವಿಡ್‌ ಸೋಂಕಿತನಿಗೆ ಹಾಸಿಗೆ ಸಿಗದೆ ಆಸ್ಪತ್ರೆ ಮುಂದೆ ಅವರ ಮನೆಯವರು ಅಳುತ್ತಿದ್ದರು.

ಈ ಪರಿಸ್ಥಿತಿಯಿಂದ ನೊಂದುಕೊಂದ ದಾಬಡ್ಕರ್‌ ಅವರು ತಮ್ಮ ಹಾಸಿಗೆಯನ್ನು ಯುವ ರೋಗಿಗೆ ಬಿಟ್ಟುಕೊಟ್ಟು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಕೋವಿಡ್‌ ಸೋಂಕಿಗೆ ಅವರು ಬಲಿಯಾಗಿದ್ದಾರೆ.

ದಾಬಡ್ಕರ್‌ ಅವರ ತ್ಯಾಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೂ ಕೂಡಾ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು