News Karnataka Kannada
Thursday, April 25 2024
Cricket
ವಿದೇಶ

ಯುವತಿ ಒಬ್ಬಳಮೇಲೆ 25 ಕಾಮುಕರಿಂದ ಗ್ಯಾಂಗ್ ರೇಪ್

Photo Credit :

ಯುವತಿ ಒಬ್ಬಳಮೇಲೆ 25 ಕಾಮುಕರಿಂದ  ಗ್ಯಾಂಗ್ ರೇಪ್

ನವದೆಹಲಿ : ಯುವತಿ ಒಬ್ಬಳಮೇಲೆ 25 ಕಾಮುಕರಿಂದ ಗ್ಯಾಂಗ್ ರೇಪ್. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಪೋಷಕರ ಭೇಟಿಗೆಂದು ತೆರಳಿದ್ದಾಗ ಈ ಘಟನೆ ಸಂಭವಿಸಿದೆ .

 

 ಪೋಷಕರನ್ನು ಭೇಟಿ ಮಾಡಿಸುತ್ತೇನೆಂದು ನಂಬಿಸಿ ಆಕೆಯನ್ನು ಕರೆಸಿಕೊಂಡಿದ್ದ ಫೇಸ್’ಬುಕ್ ಸ್ನೇಹಿತ ಈ ಕೃತ್ಯಕ್ಕೆ ಕಾರಣ ಎಂದು ದೂರಲಾಗಿದೆ . ಸ್ನೇಹಿತನ ಮಾತು ನಂಬಿ ಬಂದ ಯುವತಿ ಮೇ 5 ರಂದು ರಾತ್ರಿ ಮತ್ತು ಬೆಳಗ್ಗೆ 25 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು . ಘಟನೆ ನಡೆದು 9 ದಿನಗಳ ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ .

 

 ಸುಮಾರು ನಾಲ್ಕು ವರ್ಷಗಳಿಂದ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಅಲ್ಲಿಯೇ ವಾಸವಿದ್ದಳು . ಯುವತಿಯ ಫೇಸ್‌ಬುಕ್ ಸ್ನೇಹಿತ ಅವಳನ್ನು ಮೊಬೈಲ್’ನಲ್ಲೇ ಮದುವೆ ಪ್ರಪೋಸ್ ಮಾಡಿದ್ದ . ಸ್ವಲ್ಪ ಸಮಯದ ನಂತರ ಮದುವೆ ಬಗ್ಗೆ ಪ್ರಸ್ತಾಪಿಸಿ , ತನ್ನ ಹೆತ್ತವರಿಗೆ ಪರಿಚಯಿಸಲು ಯುವಕ ಮುಂದಾಗಿದ್ದ .

 

ಈ ಎಲ್ಲ ಮಾತನ್ನು ನಂಬಿದ ಯುವತಿ, ಮೇ 3 ರಂದು 25 ವರ್ಷದ ವ್ಯಕ್ತಿ ಹೇಳಿದ ಹೊಡಾಲ್ ಪ್ರದೇಶಕ್ಕೆ ಬಂದಳು. ಆದರೆ , ಹೆತ್ತವರನ್ನು ಭೇಟಿಯಾಗಲು ಕರೆದೊಯ್ಯುವ ಬದಲು ಸಾಗರ್‌ ಅವಳನ್ನು ರಾಮಘರ್ ಗ್ರಾಮದ ಅರಣ್ಯಕ್ಕೆ ಕರೆದೊಯ್ದಿದ್ದಾನೆ . ಸಾಗರ್‌ ಸಹೋದರ ಮತ್ತು ಅವನ ಸ್ನೇಹಿತರು ಕಾಡಿನ ಟ್ಯೂಬ್‌ವೆಲ್ ಬಳಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದ್ದು, ಯುವತಿ ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಅವಳ ಮೇಲೆ ಗುಂಡು ಹಾರಿಸಿ ಅತ್ಯಾಚಾರ ಮಾಡಿದ್ದಾರೆ .

 

 ಮರುದಿನ ಆಕೆಯನ್ನು ಆಕಾಶ್ ಎಂಬ ವ್ಯಾಪಾರಿ ಬಳಿ ಕರೆದೊಯ್ದಿದ್ದು , ಈ ಸ್ಥಳದಲ್ಲೂ ಆಕೆಯನ್ನು ಐವರು ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ . ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯ ಸ್ಥಿತಿ ಹದಗೆಟ್ಟಾಗ ಆರೋಪಿಗಳು ಅವಳನ್ನು ಬದರ್‌ಪುರ ಗಡಿಯ ಬಳಿ ಎಸೆದು ಪರಾರಿಯಾಗಿದ್ದಾರೆ . 

 

ಯುವತಿ ಹಾಸನಪುರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಮೇ 12 ರಂದು ದೂರು ದಾಖಲಿಸಿದ್ದಾಳೆ . ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ . ದೂರು ದಾಖಲಿಸಿಕೊಂಡಿರುವ ಪೊಲೀಸರು ಶುಕ್ರವಾರ ಸಾಗರ್‌ನನ್ನು ಬಂಧಿಸಿದ್ದಾರೆ . ಉಳಿದ ಆರೋಪಿಗಳಿಗಾಗಿ ಶೋದ ಕಾರ್ಯ ಮುಂದುವರೆದಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು