News Karnataka Kannada
Monday, April 22 2024
Cricket
ವಿದೇಶ

ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ

Photo Credit :

ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ

ರಾಯ್ಪುರ್​: ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್​ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.ಇಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿಯನ್ನು ಕರೆದು ಥಳಿಸುವಂತೆ ಹೇಳಿ ಎಫ್​ಐಆರ್​ ದಾಖಲಿಸಲು ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಛತ್ತೀಸ್​ಗಢದ ಸುರಾಜ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ರಣ್ಬೀರ್​ ಶರ್ಮಾ ಯುವಕನ ಮೊಬೈಲ್​ ಪಡೆದು ರಸ್ತೆಯ ಮೇಲೆ ಜೋರಾಗಿ ಎಸೆದು ಒಡೆದು ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ.
ಲಾಕ್​ಡೌನ್​ನಲ್ಲಿ ನಾನೇಕೆ ಆಚೆ ಬಂದೆ ಎಂಬುದನ್ನು ಆ ಯುವಕ ಕೆಲವು ಪತ್ರಗಳನ್ನು ತೋರಿಸಿ ವಿವರಣೆ ನೀಡುವ ಪ್ರಯತ್ನ ಮಾಡಿದಾದರೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದೆ ದಿಢೀರನೇ ಯುವಕನ ಕೆನ್ನೆಗೆ ಜಿಲ್ಲಾಧಿಕಾರಿ ಬಾರಿಸಿಯೇ ಬಿಟ್ಟರು.
ಇದಾದ ಬಳಿಕ ಕೆಲವು ಪೊಲೀಸ್​ ಸಿಬ್ಬಂದಿಗಳನ್ನು ಕರೆಯಿಸಿ ಥಳಿಸಲು ಹೇಳಿದರು. ಸಿಬ್ಬಂದಿ ಥಳಿಸುವಾಗ “ಸರಿಯಾಗಿ ಬಾರಿಸಿ” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತಾರಾಜ್ಯ ಮಂಡಳಿ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಸಂಜಿವ್​ ಗುಪ್ತ, ಜಿಲ್ಲಾಧಿಕಾರಿಗಳ ನಡೆಯು ಹೇಯ ಮತ್ತು ಐಎಎಸ್​ ಅಧಿಕಾರಿಯಾಗಲು ನಾಲಾಯಕ್​ ಎಂದು ಟೀಕಿಸಿದ್ದಾರೆ. ಈ ವಿಚಾರವನ್ನು ಛತ್ತೀಸ್​ಗಢದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದಾರೆ.ಯುವಕನ ವಿರುದ್ಧ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಆ ಯುವಕ ಅಪ್ರಾಪ್ತನಲ್ಲ. ಆತನಿಗೆ 23 ವರ್ಷ ವಯಸ್ಸಾಗಿದೆ. ಅತಿಯಾದ ವೇಗದಲ್ಲಿ ಬೈಕ್​ ಚಾಲನೆ ಮಾಡುತ್ತಿದ್ದ ಮತ್ತು ಲಾಕ್​ಡೌನ್​ ಸಂದರ್ಭದಲ್ಲಿ ಏಕೆ ಹೊರ ಬಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸಹ ನೀಡಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ವಿಚಾರಿಸಲು ಮಧ್ಯ ಪ್ರವೇಶಿಸಿದ ಸಂದರ್ಭದಲ್ಲಿ ಬೈಕ್​ನಲ್ಲಿ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪ್ರಶ್ನಿಸಿದಾಗ ಗೊಂದಲು ಉಂಟಾಗುವಂತಹ ಎರಡು ರೀತಿಯ ಉತ್ತರ ನೀಡಿದನು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು