News Karnataka Kannada
Wednesday, April 17 2024
Cricket
ವಿದೇಶ

ಯಮುನಾ ನದಿ ದಡದಲ್ಲಿ ಅರೆಬೆಂದ ಮೃತದೇಹಗಳು ಪತ್ತೆ

Photo Credit :

 ಯಮುನಾ ನದಿ ದಡದಲ್ಲಿ ಅರೆಬೆಂದ ಮೃತದೇಹಗಳು ಪತ್ತೆ

ಲಕ್ನೋ: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ನಡೆಸುವುದು ಕುಟುಂಬಸ್ಥರಿಗೆ ಸರ್ಕಾರಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ನಡುವೆಯೇ ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯ ಯಮುನಾ ನದಿಯ ದಡದಲ್ಲಿ ಕೊರೊನಾ ಸೋಂಕಿತರ ಮೃತದೇಹಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಹಮೀರ್‍ಪುರದ ಬಳಿ ಹರಿಯುವ ಯಮುನಾ ನದಿಗೆ ಕೊರೊನಾ ಸೋಂಕಿತರ ಮೃತದೇಹವನ್ನು ಎಸೆಯಲಾಗಿದೆ. ನಿನ್ನೆ ಒಂದೇ ದಿನ ಸುಮಾರು 7 ಮೃತದೇಹಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಹಮೀರ್‍ಪುರದ ಎಸ್‍ಪಿ ಅನೂಪ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ನದಿಯ ದಡದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ.ಕಾನ್ಪುರ ಹಾಗೂ ಹಮೀರ್‌ಪುರ ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಅಂತ್ಯಸಂಸ್ಕಾರ ನಡೆಸಲು ಸಮಸ್ಯೆ ಎದುರಾಗುತ್ತಿದೆ. ಇದರ ನಡುವೆಯೇ ಅರೆಬರೆ ಬೆಂದ ಮೃತದೇಹಗಳನ್ನು ತಂದು ನದಿಗೆ ಎಸೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ನದಿಯಲ್ಲಿ ಒಂದು ಅಥವಾ ಎರಡು ಮೃತದೇಹಗಳು ಸಿಗುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಕೊರೊನಾ 2ನೇ ಅಲೆಯ ನಡುವೆ ಇಷ್ಟು ಮೃತ ದೇಹಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಉಂಟಾಗುತ್ತಿರುವ ಲೋಪಗಳೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು