News Karnataka Kannada
Thursday, April 25 2024
Cricket
ವಿದೇಶ

ಮೊದಲ ಸಭೆ ನಡೆಸಿದ ಸುಪ್ರೀಂನ 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ ಫೋರ್ಸ್

Photo Credit :

ಮೊದಲ ಸಭೆ ನಡೆಸಿದ ಸುಪ್ರೀಂನ 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ ಫೋರ್ಸ್

ನವದೆಹಲಿ: ದೇಶಾದ್ಯಂತ ಆಕ್ಸಿಜನ್​ನನ್ನು ಸುವ್ಯವಸ್ಥಿತವಾಗಿ ಮತ್ತು ತ್ವರಿತಗತಿಯಲ್ಲಿ ಪೂರೈಕೆಯಾಗುತ್ತಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸ್ಥಾಪಿಸಿದ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯ ಮೊದಲ ಸಭೆ ಭಾನುವಾರ ನಡೆಯಿತು ಎಂದು ಮೂಲಗಳು ತಿಳಿಸಿವೆ.ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರಲ್ಲಿ ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ವಿಜ್ಞಾನ ವಿವಿ ಮಾಜಿ ಉಪಕುಲಪತಿ ಡಾ. ಬವತೋಷ ಬಿಸ್ವಾಸ್​, ದೆಹಲಿ ಗಂಗಾ ರಾಮ್​ ಆಸ್ಪತ್ರೆ ಅಧ್ಯಕ್ಷ ಡಾ. ದೇವೇಂದ್ರ ಸಿಂಗ್ ರಾಣಾ, ಬೆಂಗಳೂರು ನಾರಾಯಣ ಹೇಲ್ತ್​ ಕೇರ್​ನ ಡೈರೆಕ್ಟರ್ ಡಾ. ದೇವಿ ಶೆಟ್ಟಿ ಸೇರಿದಂತೆ ಇತರರು ಈ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯ ತಂಡ ಮೊದಲ ಸಭೆ ನಡೆಸಿದೆ ಎನ್ನಲಾಗ್ತಿದೆ.ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಕೇಂದ್ರ ಕಾರ್ಯದರ್ಶಿ (ಎಂಆರ್‌ಟಿಎಚ್) ಗಿರಿಧರ್ ಅರಮನೆ ಸಹ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ, ತಂಡದಲ್ಲಿ ಕೆಲವೇ ತಜ್ಞರನ್ನು ಸಹಕರಿಸಬಹುದಾಗಿದೆ. ಹೀಗಾಗಿ ವಿ ಕೆ ಪಾಲ್, ಎನ್‌ಐಟಿಐ ಆಯೋಗದ ಸದಸ್ಯ (ಆರೋಗ್ಯ), ನವದೆಹಲಿಯ ಏಮ್ಸ್​ ನಿರ್ದೇಶಕ ರಣದೀಪ್ ಗುಲೇರಿಯಾ, ಡಿಜಿ ಐಸಿಎಂಆರ್ ಮತ್ತು ಕಾರ್ಯದರ್ಶಿ (ಡಿಹೆಚ್ಆರ್) ಬಲರಾಮ್ ಭಾರ್ಗವ ಮತ್ತು ಆರೋಗ್ಯ ಸಚಿವಾಲಯದ ಡಿಜಿಎಚ್‌ಎಸ್ ಸುನಿಲ್ ಕುಮಾರ್ ಅವರು ವಿಶೇಷ ಆಹ್ವಾನಿತರಾಗಿದ್ದು, ಸಭೆಯಲ್ಲಿ ಉಪಸ್ಥಿತರಿದ್ದರು ಎನ್ನಲಾಗ್ತಿದೆ.ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮತ್ತು ಆಕ್ಸಿಜನ್​ನನ್ನು ತ್ವರಿತಗತಿಯಲ್ಲಿ ಪೂರೈಸುವಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಮಾಡಿದ ಮಹತ್ವದ ಕಾರ್ಯವನ್ನು ರಾಷ್ಟ್ರೀಯ ಕಾರ್ಯಪಡೆಯ ಎಲ್ಲಾ ಸದಸ್ಯರು ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆಮ್ಲಜನಕದ ಉತ್ಪಾದನೆ ಮತ್ತು ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸಲು, ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ನಿರ್ವಹಿಸಲು ಮತ್ತು ವೈದ್ಯಕೀಯ ಆಮ್ಲಜನಕದ ಬಳಕೆಯಲ್ಲಿ ವೈಯಕ್ತಿಕ ಆರೋಗ್ಯ ಸೌಲಭ್ಯಗಳು ಆರ್ಥಿಕತೆಯ ಬಗ್ಗೆ ಸದಸ್ಯರು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಎರಡನೇ ಹಂತದ ಕೋವಿಡ್​ ಅಲೆ ಜೋರಾಗುತ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಹೀಗಾಗಿ ಆಸ್ಪತ್ರೆಗಳಲ್ಲಿ ಸರಿಯಾದ ಆಮ್ಲಜನಕ ಲಭ್ಯವಾಗದೇ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನ ಮನಗಂಡಿರುವ ಸುಪ್ರೀಂಕೋರ್ಟ್​ ಮಹತ್ವದ ನಿರ್ಧಾರ ಕೈಗೊಂಡಿದೆ. 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ ಫೋರ್ಸ್​​ ರಚನೆ ಮಾಡಿದೆ. ನ್ಯಾ. ಚಂದ್ರಚೂಡ್​ ನೇತೃತ್ವದ ಸುಪ್ರೀಂಕೋರ್ಟ್​​​ ಪೀಠ ಈ ಟಾಸ್ಕ್ ಫೋರ್ಸ್​ ರಚನೆ ಮಾಡಿದ್ದು, ಆಕ್ಸಿಜನ್​ ಹಂಚಿಕೆ ವಿಚಾರವಾಗಿ ಕೆಲಸ ಮಾಡಲಿದೆ. ಜತೆಗೆ ಸುಪ್ರೀಂಕೋರ್ಟ್​ಗೆ ನೇರವಾಗಿ ವರದಿ ಸಲ್ಲಿಸಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು