News Karnataka Kannada
Sunday, April 21 2024
Cricket
ವಿದೇಶ

ಮೈನಸ್ ಶೇ.7.3ಕ್ಕೆ ಕುಸಿದ ಜಿಡಿಪಿ

Photo Credit :

ಮೈನಸ್ ಶೇ.7.3ಕ್ಕೆ  ಕುಸಿದ  ಜಿಡಿಪಿ

ನವದೆಹಲಿ: ಕರೊನಾ ಸಾಂಕ್ರಾಮಿಕದ ಕಾರಣ 2020-21ನೇ ಸಾಲಿನ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಮೈನಸ್ ಶೇ. 7.3ಕ್ಕೆ ತಗ್ಗಿದೆ. ಜಿಡಿಪಿಯ ಶೇ. 9.3 ಆರ್ಥಿಕ ಸಾಲಿನ ವಿತ್ತೀಯ ಕೊರತೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಇದು ಕಳೆದ 11 ವರ್ಷದಲ್ಲೇ ಅತ್ಯಂತ ಕನಿಷ್ಠ ಮಟ್ಟದ ಜಿಡಿಪಿ ಆಗಿದೆ. ಆರ್ಥಿಕ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ ಕರೊನಾ ಎರಡನೇ ಅಲೆ ತೀಕ್ಷ್ಣಗೊಳ್ಳುತ್ತಿರುವ ಮಧ್ಯೆಯೂ ಶೇ. 1.6ರಷ್ಟು ಬೆಳವಣಿಗೆಯನ್ನು ಜಿಡಿಪಿ ದಾಖಲಿಸಿದೆ. 2019-20ರಲ್ಲಿ ಜಿಡಿಪಿ ಶೇ. 4 ಇತ್ತು. ಈ ಆರ್ಥಿಕ ಸಾಲಿನ ಕಡೆಯ ಚರಣದಲ್ಲಿ ದೇಶದಲ್ಲಿ ಕರೊನಾ ಕಾಲಿಟ್ಟಿತ್ತು.
ತಗ್ಗಿದ ಕೈಗಾರಿಕಾ ವಲಯದ ಹಣದುಬ್ಬರ: ಕೈಗಾರಿಕಾ ವಲಯದ ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ. 5.14ಕ್ಕೆ ಇಳಿದಿರುವುದು ಕೊಂಚ ನಿರಾಳ ನೀಡಿದೆ. ಮಾರ್ಚ್​ನಲ್ಲಿ ಇದರ ಪ್ರಮಾಣ ಶೇ. 5.64 ಇತ್ತು. 2020ರ ಏಪ್ರಿಲ್​ನಲ್ಲಿ ಇದು ಶೇ. 5.45 ದಾಖಲಾಗಿತ್ತು ಎಂದು ಕಾರ್ವಿುಕ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಆಹಾರ ವಲಯದ ಚಿಲ್ಲರೆ ಹಣದುಬ್ಬರವು ಶೇ. 4.78ಕ್ಕೆ ಇಳಿದಿದೆ. ಇದು ಮಾರ್ಚ್​ನಲ್ಲಿ ಶೇ. 5.36 ಮತ್ತು 2020ರ ಏಪ್ರಿಲ್​ನಲ್ಲಿ ಶೇ. 6.56 ಇತ್ತು ಎಂದು ಸಚಿವಾಲಯ ಹೇಳಿದೆ.
ಸಂಕಷ್ಟದ ವರ್ಷ: ಸೋಂಕಿನ ಮೊದಲ ಅಲೆ ವೇಳೆ ಲಾಕ್​ಡೌನ್ ನಿರ್ಬಂಧಗಳು ಕಠಿಣವಾಗಿದ್ದ ಕಾರಣ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ ದೇಶದಲ್ಲಿ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಆರ್ಥಿಕತೆ ಪೂರ್ಣವಾಗಿ ಕುಸಿದು ಜಿಡಿಪಿ ಮೈನಸ್ ಶೇ. 23.9ಕ್ಕೆ ಕುಸಿದಿತ್ತು. ಜೂನ್ ನಂತರ ನಿರ್ಬಂಧಗಳು ಹಂತ ಹಂತವಾಗಿ ಸಡಿಲವಾಗಿದ್ದರಿಂದ ಆರ್ಥಿಕ ಚುಟುವಟಿಕೆ ನಿಧಾನವಾಗಿ ಗರಿಗೆದರಿದವು. ಆದರೆ, ಜಿಡಿಪಿ ಸಂಕುಚಿತದಲ್ಲೇ ಮುನ್ನಡೆದರೂ ಮೊದಲ ತ್ರೖೆಮಾಸಿಕದ ಆಘಾತಕ್ಕಿಂತ ಸಾಕಷ್ಟು ಸುಧಾರಿಸಿಕೊಂಡು ಮೈನಸ್ ಶೇ. 7.5ಕ್ಕೆ ಬಂದಿತ್ತು. ಮೂರನೇ ತ್ರೖೆಮಾಸಿಕದ ಅವಧಿಯಲ್ಲಿ ಲಾಕ್​ಡೌನ್ ನಿರ್ಬಂಧ ಹೆಚ್ಚು ಕಠಿಣವಾಗಿ ಇರಲಿಲ್ಲ. ಕೈಗಾರಿಕೆ, ವ್ಯಾಪಾರೋದ್ಯಮಗಳು ಹಳಿಗೆ ಬರತೊಡಗಿದವು. ಹೀಗಾಗಿ ಜಿಡಿಪಿ ಶೂನ್ಯ ಪಥ ಬಿಟ್ಟು ಪ್ರಗತಿಯತ್ತ (ಶೇ. 0.4) ಹೊರಳಿತು. ಜನವರಿ ಅಂತ್ಯದ ಹೊತ್ತಿಗೆ ಕರೊನಾ ಸೋಂಕು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಚೇತರಿಕೆ ಪ್ರಮಾಣ ಹೆಚ್ಚಿತ್ತು. ಹೀಗಾಗಿ ಹೆಚ್ಚು ಆರ್ಥಿಕ ಚಟುವಟಿಕೆಗಳು ಮುನ್ನಡೆಯಲು ಆರಂಭಿಸಿದ್ದರಿಂದ ಈ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 1.6ಕ್ಕೆ ಮುಟ್ಟಲು ಸಾಧ್ಯವಾಯಿತು. ಇಷ್ಟೆಲ್ಲವಾದರೂ ದೇಶದ ಕೃಷಿ ವಲಯ ಮೊದಲ ತ್ರೖೆಮಾಸಿಕದಿಂದಲೂ ಧನಾತ್ಮಕವಾಗಿಯೇ ಮುನ್ನಡೆದಿದ್ದು ಸಮಾಧಾನಕರ. 2021ರ ಫೆಬ್ರವರಿ ಎರಡನೇ ವಾರದ ನಂತರ ಶುರುವಾದ 2ನೇ ಅಲೆ ದೇಶವನ್ನು ಬೆಚ್ಚಿಬೀಳಿಸತೊಡಗಿತು. ಮಾರ್ಚ್ ಅಂತ್ಯದ ಹೊತ್ತಿಗೆ ನಿತ್ಯದ ಸೋಂಕಿನ ಪ್ರಮಾಣ ಲಕ್ಷದ ಸಮೀಪಕ್ಕೆ ಬಂದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು