News Karnataka Kannada
Tuesday, April 23 2024
Cricket
ವಿದೇಶ

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಸ್ವದೇಶೀ ಜಲಾಂತರ್ಗಾಮಿ ನಿರ್ಮಾಣ

Photo Credit :

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ  ಸ್ವದೇಶೀ ಜಲಾಂತರ್ಗಾಮಿ ನಿರ್ಮಾಣ

ನವದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಬಹುದೊಡ್ಡ ಉತ್ತೇಜನದ ಯೋಜನೆಗೆ ಒಟ್ಟಾರೆ 50 ಸಾವಿರ ಕೋಟಿ ರೂಪಾಯಿಗಳ ಮಂಜೂರಾತಿಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಆರು ಜಲಾಂತರ್ಗಾಮಿ ನೌಕೆಗಳನ್ನು ಹೊಂದಲು 43,000 ಕೋಟಿ ರೂಪಾಯಿ, 6,800 ಕೋಟಿ ರೂಪಾಯಿ ಮೌಲ್ಯದ ಯುದ್ಧೋಪಕರಣ ಸಂಗ್ರಹದ ಯೋಜನೆಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಒಪ್ಪಿಗೆ ನೀಡಿದೆ.
ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್: ನೌಕಾಪಡೆಯ ಸಬ್​ವೆುರಿನ್ ಖರೀದಿ ಪ್ರಸ್ತಾವನೆಗೆ ‘ಪಿ-75 ಇಂಡಿಯಾ’ ಪ್ರಾಜೆಕ್ಟ್ ಎಂದು ನಾಮಕರಣ ಮಾಡಲಾಗಿದೆ. 24 ಹೊಸ ಜಲಾಂತರ್ಗಾಮಿಗಳನ್ನು ಖರೀದಿಸುವ ಯೋಜನೆ ರೂಪಿಸಿಕೊಂಡಿದೆ. ಈ ಪೈಕಿ ಆರು ನೌಕೆಗಳು ಅಣ್ವಸ್ತ್ರ ದಾಳಿ ನಡೆಸಬಲ್ಲ ಸಾಮರ್ಥ್ಯದವು. ಈ ಜಲಾಂತರ್ಗಾಮಿಗಳನ್ನು ಸ್ವದೇಶಿ ರಕ್ಷಣಾ ಉತ್ಪಾದಕರ ನೆರವಿನೊಂದಿಗೆ ನಿರ್ವಿುಸಲು ಸರ್ಕಾರ ಉದ್ದೇಶಿಸಿದೆ. ಇದು ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್ ಮತ್ತು ಅತಿದೊಡ್ಡ ಸ್ವದೇಶಿ ರಕ್ಷಣಾ ಪ್ರಾಜೆಕ್ಟ್ ಗಳಲ್ಲಿ ಒಂದು ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಜಲಾಂತರ್ಗಾಮಿ ನಿರ್ವಣದ ಟೆಂಡರ್ ಅನ್ನು ಎಲ್ ಆಂಡ್ ಟಿಮತ್ತು ಸರ್ಕಾರಿ ಸ್ವಾಮ್ಯದ ಮಝುಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್)ಗೆ ನೀಡುವುದಕ್ಕೆ ಡಿಎಸಿ ಒಪ್ಪಿಗೆ ನೀಡಿದೆ. ಈಗಾಗಲೇ ಆಯ್ಕೆ ಮಾಡಿರುವ ವಿದೇಶಿ ಶಿಪ್​ಯಾರ್ಡ್​ಗಳಾದ ರೊಸೊಬೊರೊನ್ ಎಕ್ಸ್​ಪೋರ್ಟ್(ರಷ್ಯಾ), ದೇವೂ (ದಕ್ಷಿಣ ಕೊರಿಯ), ತೈಸ್ಸೆನ್​ಕ್ರುಪ್ ಮರೈನ್ ಸಿಸ್ಟಮ್್ಸ (ಜರ್ಮನಿ), ನವನ್​ಟಿಯಾ(ಸ್ಪೇನ್), ನಾವಲ್ ಗ್ರೂಪ್ (ಫ್ರಾನ್ಸ್)ಗಳ ಪೈಕಿ ಒಂದರ ಜತೆಗೆ ಸ್ವದೇಶಿ ಕಂಪನಿ ಒಪ್ಪಂದ ಮಾಡಿಕೊಳ್ಳಬೇಕಿದ್ದು, ಇನ್ನೊಂದು ತಿಂಗಳಲ್ಲಿ ನಿರ್ವಣದ ಪ್ರಸ್ತಾವನೆಗಾಗಿ ಮನವಿ ಪ್ರಕಟಿಸುವ ನಿರೀಕ್ಷೆ ಇದೆ.
ಅಣ್ವಸ್ತ್ರ ದಾಳಿ ಸಬ್​ವುರಿನ್ ರಷ್ಯಾಕ್ಕೆ: ಭಾರತೀಯ ನೌಕಾಪಡೆಗೆ 2012ರ ಏಪ್ರಿಲ್ 4ರಂದು ನಿಯೋಜಿತವಾಗಿದ್ದ ರಷ್ಯನ್ ಅಕುಲಾ-2 ಐಎನ್​ಎಸ್ ಚಕ್ರ ಕ್ಲಾಸ್ ಸಬ್​ವುರಿನ್ ತನ್ನ 10 ವರ್ಷದ ಲೀಸ್ ಅವಧಿಗೆ 10 ತಿಂಗಳು ಬಾಕಿ ಇರುವಂತೆಯೇ ರಷ್ಯಾಕ್ಕೆ ಹಿಂದಿರುಗಿದೆ. ಈ ನೌಕೆ ವಿಶಾಖಪಟ್ಟಣ ನೆಲೆಯಿಂದ ಕಾರ್ಯಾಚರಿಸುತ್ತಿತ್ತು. ಸಿಂಗಾಪುರ ಹೆರಾಲ್ಡ್್ಸ ಜಲಸಂಧಿಯಲ್ಲಿ ಭಾರತೀಯ ನೌಕಾಪಡೆಗೆ ಸೇವೆ ಒದಗಿಸುತ್ತಿತ್ತು. 200 ಕೋಟಿ ಡಾಲರ್​ಗೆ ಇದನ್ನು ಲೀಸ್​ಗೆ ಪಡೆಯಲಾಗಿತ್ತು. ಈ ನೌಕೆಯ ಸ್ಥಾನದಲ್ಲಿ ಮತ್ತೊಂದು ಹೊಸ ಅತ್ಯಾಧುನಿಕ ಸಬ್​ವೆುರಿನ್ ಐಎನ್​ಎಸ್ ಚಕ್ರ ಹೆಸರಿನಲ್ಲೇ ಸೇರ್ಪಡೆಯಾಗಲಿದೆ. ಇದಕ್ಕೆ ಸಂಬಂಧಿಸಿದ 300 ಕೋಟಿ ಡಾಲರ್ ಒಪ್ಪಂದ 2019ರ ಮಾರ್ಚ್​ನಲ್ಲಿ ಆಗಿತ್ತು. ಈ ನೌಕೆ 2025ರಲ್ಲಿ ನೌಕಾಪಡೆ ಸೇರ್ಪಡೆಯಾಗಲಿದೆ.
1.75 ಲಕ್ಷ ಕೋಟಿ ರೂ.ಗುರಿ: ಮುಂದಿನ ಐದು ವರ್ಷದಲ್ಲಿ ರಕ್ಷಣಾ ಉತ್ಪಾದನಾ ವಹಿವಾಟು 1.75 ಲಕ್ಷ ಕೋಟಿ ರೂಪಾಯಿ ಮತ್ತು 35,000 ಕೋಟಿ ರೂಪಾಯಿ ಮೌಲ್ಯದ ಸೇನಾ ಹಾರ್ಡ್​ವೇರ್ ರಫ್ತು ಮಾಡುವ ಗುರಿಯನ್ನು ರಕ್ಷಣಾ ಸಚಿವಾಲಯ ಹಾಕಿಕೊಂಡಿದೆ.
ಭಾರತದ ನೌಕಾಪಡೆ ಬಲ
15 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು
2 ಅಣ್ವಸ್ತ್ರ ದಾಳಿ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ
57 ಕ್ಯಾರೀರ್ ಬೋರ್ನ್ ಫೈಟರ್ ಜೆಟ್​ಗಳು
(ಖರೀದಿ ಪ್ರಕ್ರಿಯೆಯಲ್ಲಿದೆ)
111 ನೌಕಾ ಬಳಕೆಯ ಹೆಲಿಕಾಪ್ಟರ್​ಗಳು
(ಖರೀದಿ ಪ್ರಕ್ರಿಯೆಯಲ್ಲಿದೆ)
123 ಬಹೂಪಯೋಗಿ ಹೆಲಿಕಾಪ್ಟರ್​ಗಳು.
(ಖರೀದಿ ಪ್ರಕ್ರಿಯೆಯಲ್ಲಿದೆ)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು