News Karnataka Kannada
Saturday, April 13 2024
Cricket
ವಿದೇಶ

ಮೃಗಾಲಯ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ

Photo Credit :

 ಮೃಗಾಲಯ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು, :- ಮೈಸೂರು ಮೃಗಾಲಯದ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ತೆರೆಸಿಯನ್ ಅಲುಮನ್ಸ್ ಅವರು ತಲಾ 20,000 ರೂ.ಗಳನ್ನು ಪಾವತಿಸಿ ಇಂಡಿಯನ್ ಗ್ರೇ ವುಲ್ಸ್ ಹಾಗೂ ಪ್ಲೆಮಿಂಗ್‍ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಚಿತ್ರದುರ್ಗದ ಶಶಿಕಲಾ ಎಂಬುವವರು 5,000 ರೂ.ಗಳನ್ನು ಪಾವತಿಸಿ ಬಿರತೆ ಬೆಕ್ಕನ್ನು, ಮೈಸೂರಿನ
ಗಹನ್ ಡಿ ಗೌಡ ಎಂಬುವವರು 7,500 ರೂಗಳನ್ನು ಪಾವತಿಸಿ ಮಚ್ಚೆಯುಳ್ಳ ಜಿಂಕೆಯನ್ನು, ಆರ್. ಸೆಲ್ವರಾಜ್ ಅವರು 3,500 ರೂ.ಗಳನ್ನು ಪಾವತಿಸಿ ಕಾಳಿಂಗ ಸರ್ಪವನ್ನು ಹಾಗೂ ಎಂ.ಆರ್.ನಿತೇಶ್ ಅವರು 3,500 ರೂಗಳನ್ನು ಪಾವತಿಸಿ ಕಾಳಿಂಗ ಸರ್ಪವನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯದ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು