News Karnataka Kannada
Monday, April 22 2024
Cricket
ವಿದೇಶ

ಮೂರು ಮಕ್ಕಳನ್ನು ಪಡೆಯಲು ಅನುಮತಿ ನೀಡಿದ ಚೈನಾ ಸರ್ಕಾರ

Photo Credit :

ಮೂರು ಮಕ್ಕಳನ್ನು ಪಡೆಯಲು ಅನುಮತಿ ನೀಡಿದ ಚೈನಾ ಸರ್ಕಾರ

ಚೈನಾ:‌ ವಿವಾಹಿತ ದಂಪತಿಗಳು ಮೂರು ಮಕ್ಕಳನ್ನ ಹೊಂದಿರಬಹುದು ಎಂದು ಚೀನಾ ಸೋಮವಾರ ಘೋಷಿಸಿದೆ. ಇತ್ತೀಚಿನ ದತ್ತಾಂಶವು ವಿಶ್ವದ ಅತ್ಯಂತ ಜನನಿಬಿಡ ದೇಶವಾದ ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡಿದ್ದು, ಸರ್ಕಾರದಿಂದ ಈ ಘೋಷಣೆ ಹೊರ ಬಿದ್ದಿದೆ.

ಇಲ್ಲಿಯವರೆಗಿದ್ದ 2 ಮಕ್ಕಳ ನೀತಿಯನ್ನ ಬದಲಾಯಿಸಿರುವ ಚೀನಾ ಸಧ್ಯ ಕುಟುಂಬ ಮೂರು ಹೊಂದಬಹುದು ಎಂದಿದೆ. ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೊಲಿಟ್ ಬ್ಯೂರೋ ಸಭೆಯಲ್ಲಿ ಈ ಬದಲಾವಣೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

2016ರಲ್ಲಿ ಚೀನಾ ತನ್ನ ದಶಕಗಳಷ್ಟು ಹಳೆಯದಾದ ಒಂದು ಮಗುವಿನ ನೀತಿಯನ್ನ ರದ್ದುಗೊಳಿಸಿತು. ಆರಂಭದಲ್ಲಿ ಜನಸಂಖ್ಯಾ ಸ್ಫೋಟವನ್ನ ನಿಲ್ಲಿಸಲು ಈ ನೀಡಿತಿಯನ್ನ ಹೇರಲಾಗಿತ್ತು.

‘ಜನನ ನೀತಿಯನ್ನು ಮತ್ತಷ್ಟು ಉತ್ತಮಗೊಳಿಸಲು, ಚೀನಾ ವಿವಾಹಿತ ದಂಪತಿಗಳು ಹೊಂದಬಹುದಾದ ಮೂರು ಮಕ್ಕಳ ನೀತಿಯನ್ನ ಜಾರಿಗೆ ತರುತ್ತದೆ’ ಎಂದು ಕ್ಸಿನ್ಹುವಾ ಸಭೆಯ ವರದಿಯಲ್ಲಿ ತಿಳಿಸಿದೆ.

ನೀತಿ ಬದಲಾವಣೆಯು ‘ಬೆಂಬಲಿತ ಕ್ರಮಗಳೊಂದಿಗೆ ಬರಲಿದೆ. ಇದು ನಮ್ಮ ದೇಶದ ಜನಸಂಖ್ಯಾ ರಚನೆಯನ್ನು ಸುಧಾರಿಸಲು ಅನುಕೂಲಕರವಾಗಿರುತ್ತದೆ.

ವಯಸ್ಸಾದ ಜನಸಂಖ್ಯೆಯನ್ನು ಸಕ್ರಿಯವಾಗಿ ನಿಭಾಯಿಸುವ ಮತ್ತು ಮಾನವ ಸಂಪನ್ಮೂಲಗಳ ಅನುಕೂಲ, ದತ್ತಿಯನ್ನ ಕಾಪಾಡಿಕೊಳ್ಳುವ ದೇಶದ ಕಾರ್ಯತಂತ್ರವನ್ನು ಪೂರೈಸುತ್ತದೆ’ ಎಂದು ಕ್ಸಿನ್ಹುವಾ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು