News Karnataka Kannada
Saturday, April 13 2024
Cricket
ವಿದೇಶ

ಮುಂಬೈನಲ್ಲಿ ಐದು ವಾರಗಳ ಬಳಿಕ ಕಡಿಮೆಯಾದ ಸೋಂಕು ಪ್ರಕರಣಗಳು

Photo Credit :

ಮುಂಬೈನಲ್ಲಿ ಐದು ವಾರಗಳ ಬಳಿಕ ಕಡಿಮೆಯಾದ ಸೋಂಕು ಪ್ರಕರಣಗಳು

ಮುಂಬೈ : ಕೋವಿಡ್​ 2ನೇ ಅಲೆಗೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಮುಂಬೈ ಹಾಟ್​​ಸ್ಪಾಟ್​ ಆಗಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 2,624 ಹೊಸ ಕೊರೊನಾ ಕೇಸ್​ಗಳು ಹಾಗೂ 78 ಸಾವು ಸೋಮವಾರ ವರದಿಯಾಗಿದ್ದು, ಐದು ವಾರಗಳ ಬಳಿಕ ನಗರದಲ್ಲಿ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.
ಮಾರ್ಚ್ 17 ರಂದು 2,377 ಪ್ರಕರಣಗಳು ಪತ್ತೆಯಾಗಿದ್ದ ಮುಂಬೈನಲ್ಲಿ ಆನಂತರ ದೈನಂದಿನ ಸೋಂಕಿತರ ಸಂಖ್ಯೆ ಐದು ಸಾವಿರದವರೆಗೆ ಹೆಚ್ಚುತ್ತಲೇ ಹೋಗಿತ್ತು. ಇದೀಗ 5 ವಾರಗಳ ಬಳಿಕ ಹೊಸ ಕೇಸ್​ಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಕೋವಿಡ್ ಪರೀಕ್ಷೆಗಳನ್ನೂ ಕಡಿಮೆ ಮಾಡಲಾಗಿದೆ. ಪ್ರತಿನಿತ್ಯ ಮುಂಬೈನ ಸುಮಾರು 50,000 ಮಂದಿಗೆ ಈವರೆಗೆ ಟೆಸ್ಟ್​ ಮಾಡಲಾಗುತ್ತಿದ್ದು, ಭಾನುವಾರ ಕೇವಲ 38,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಮುಂಬೈನಲ್ಲಿ ಈವರೆಗೆ 6,58,621 ಕೇಸ್​​ಗಳು ಹಾಗೂ 13,372 ಸಾವು ವರದಿಯಾಗಿದೆ.
ಮಹಾರಾಷ್ಟ್ರ ರಾಜ್ಯಾದ್ಯಂತ ಕೂಡ ಕಳೆದೊಂದು ತಿಂಗಳಿನಿಂದ ಒಂದೇ ದಿನದಲ್ಲಿ 60,000ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಸೋಮವಾರ 48,621 ಹೊಸ ಪ್ರಕರಣಗಳು ದಾಖಲಾಗಿವೆ. ವೈರಸ್ ಉಲ್ಬಣವನ್ನು ನಿಯಂತ್ರಿಸಲು ಸಿಎಂ ಉದ್ಧವ್​ ಠಾಕ್ರೆ ರಾಜ್ಯದಲ್ಲಿ ಏಪ್ರಿಲ್​ 21ರಿಂದ ಲಾಕ್​ಡೌನ್​​ ಹೇರಿದ್ದು, ಇದರ ಪರಿಣಾಮ ಕೇಸ್​ಗಳು ಕಡಿಮೆಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಇಲ್ಲಿಯವೆರೆಗೆ 70 ಸಾವಿರ ಜನರು ಮಾರಕ ಸೋಂಕಿಗೆ ಬಲಿಯಾಗಿದ್ದು, 47ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು