News Karnataka Kannada
Saturday, April 20 2024
Cricket
ವಿದೇಶ

ಮುಂದಿನ 2 ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಲಭ್ಯ

Photo Credit :

ಮುಂದಿನ 2 ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಲಭ್ಯ

ನವದೆಹಲಿ: ಮುಂದಿನ 2 ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೆರಿಯಾ ಹೇಳಿದ್ದಾರೆ.ಕೊರೊನಾ ಲಸಿಕೆ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಭಾರತ ಮುಂದಿನ 2 ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಗಳಿಂದ ಲಸಿಕೆಯನ್ನು ಆಮದು ಮಾಡಲಿದೆ. ಹೀಗಾಗಿ ಕೊರತೆಯಾಗುವುದಿಲ್ಲ ಎಂದು ತಿಳಿಸಿದರು.ಯುವ ಜನತೆಗೆ 3-4 ತಿಂಗಳ ನಂತರ ಲಸಿಕೆ ನೀಡಬಹುದು. ಆದರೆ ಎರಡಕ್ಕಿಂತ ಹೆಚ್ಚು ರೋಗಗಳಿಂದ ಬಳಲುವ ಮಂದಿಗೆ ಮೊದಲು ಲಸಿಕೆ ನೀಡಬೇಕು. ಇದರಿಂದಾಗಿ ಕೋವಿಡ್ ಸಾವುಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸದ್ಯ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಇದಕ್ಕೆ ಹೊಸದಾಗಿ ರಷ್ಯಾ ಅಭಿವೃದ್ಧಿ ಪಡಿಸಿದ ಸ್ಪುಟ್ನಿಕ್ ವಿ ಲಸಿಕೆ ಸೇರ್ಪಡೆಯಾಗಿದೆ. ಶುಕ್ರವಾರ ಮೊದಲ ಬಾರಿಗೆ ಡೋಸ್ ನೀಡಲಾಗಿದ್ದು ಮುಂದಿನ ವಾರ ಈ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು