News Karnataka Kannada
Sunday, April 14 2024
Cricket
ವಿದೇಶ

ಮಾದಕ ಪದಾರ್ಥ ಸಾಗಾಟ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

Photo Credit :

ಮಾದಕ ಪದಾರ್ಥ ಸಾಗಾಟ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

ಬೆಂಗಳೂರು : ಮಾದಕ ಪದಾರ್ಥವಾದ ಹ್ಯಾಶಿಶ್​ ಆಯಿಲ್​ಅನ್ನು ಪರದೇಶಗಳಿಗೆ ಸಾಗಿಸುವ ಕೃತ್ಯದಲ್ಲಿ ತೊಡಗಿದ್ದ ಇಬ್ಬರನ್ನೂ ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈರ್ವರನ್ನು ಬಂಧಿಸಿದ್ದಾರೆ.

 

ಜೂನ್ 4 ರಂದು ಕತಾರ್​ಗೆ ಕಳಿಸಲಾಗುತ್ತಿದ್ದ ಮಾದಕ ವಸ್ತುಗಳನ್ನು ಕಾರ್ಯಾಚರಣೆ ನಡೆಸಿ ಎನ್.ಸಿ.ಬಿ. ಪತ್ತೆ ಹಚ್ಚಿತ್ತು. 13 ಬ್ಯಾಕ್ ಪ್ಯಾಕ್​ಗಳಲ್ಲಿ 1.2 ಕೆ.ಜಿ ಹ್ಯಾಶಿಶ್ ಆಯಿಲ್‌ಅನ್ನು ವಶಪಡಿಸಿಕೊಂಡಿತ್ತು. ತನಿಖೆ ಮುಂದುವರೆಸಿದ ಎನ್​ಸಿಬಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು. 

 

ಆರೋಪಿಗಳ ಬಳಿಯಿಂದ 2.6 ಕೆಜಿ ಹ್ಯಾಶಿಶ್ ಆಯಿಲ್ ಜಪ್ತಿಪಡಿಸಿಕೊಂಡಿದ್ದು, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಕತಾರ್, ಮಾಲ್ಡೀವ್ಸ್, ಶ್ರೀಲಂಕಾಗೆ ವಸ್ತುಗಳ ಸರಬರಾಜು ಮಾಡುತ್ತಿದ್ದ ಆರ್.ಖಾನ್ ಹಾಗೂ ಬಂಧಿತರು.

 

ಈ ಮಾದಕ ಪದಾರ್ಥವನ್ನು ಕಾಸರಗೋಡಿನಿಂದ ಕತಾರ್​​ಗೆ ಸರಬರಾಜು ಮಾಡುತ್ತಿದ್ದರು . ಈ ಜಾಲದ ಕಿಂಗ್​​ಪಿನ್​ಗಳನ್ನು 2019ರಲ್ಲಿ‌ ಎನ್​ ಅಧಿಕಾರಿಗಳು ಬಂಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು