News Karnataka Kannada
Tuesday, April 23 2024
Cricket
ವಿದೇಶ

ಮಾತೃಭೂಮಿ ನ್ಯೂಸ್ ಚಾನಲ್ ವರದಿಗಾರ ವಿಪಿನ್ ಚಂದ್ ಕೊರೋನಾಗೆ ಬಲಿ

Photo Credit :

ಮಾತೃಭೂಮಿ ನ್ಯೂಸ್ ಚಾನಲ್ ವರದಿಗಾರ ವಿಪಿನ್ ಚಂದ್ ಕೊರೋನಾಗೆ ಬಲಿ

ಕೊಚ್ಚಿ: ಕೇರಳದ ಕೊಚ್ಚಿ ಮೂಲದ ಪತ್ರಕರ್ತರೊಬ್ಬರು ಕೋವಿಡ್-19 ಸಾಂಕ್ರಾಮಿಕದಿಂದ ಸಾವನ್ನಪ್ಪಿದ್ದು, ಪತ್ರಕರ್ತರನ್ನು ಮುಂಚೂಣಿ ಸೇನಾನಿಗಳಾಗಿ ಘೋಷಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಲಯಾಳಂ ನ್ಯೂಸ್ ಚಾನೆಲ್ ಮಾತೃಭೂಮಿ ನ್ಯೂಸ್ ಹಿರಿಯ ಮುಖ್ಯ ವರದಿಗಾರ ವಿಪಿನ್ ಚಂದ್ (41) ಶನಿವಾರ ಕೋವಿಡ್-19 ರೋಗಗಳಿಂದ ಮೃತಪಟ್ಟಿದ್ದಾರೆ.

ನ್ಯೂಮೋನಿಯ ಬಂದ ನಂತರ ವಿಪಿನ್ ಆರೋಗ್ಯ ಕ್ಷಿಣಿಸಿತ್ತು, ನಂತರ ಕೊಚ್ಚಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆದರೆ, ಭಾನುವಾರ ಹಠಾತ್ತನೆ ಹೃದಯಾಘಾತ ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ವಿಪಿನ್ ಚಂದ್ 2005ರಲ್ಲಿ ಇಂಡಿಯಾ ವಿಷನ್ ಟಿವಿ ಚಾನೆಲ್ ಮೂಲಕ ವೃತ್ತಿ ಆರಂಭಿಸಿದ್ದರು. 2012ರಲ್ಲಿ ಮಾತೃಭೂಮಿಗೆ ಸೇರಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು