News Karnataka Kannada
Friday, April 19 2024
Cricket
ವಿದೇಶ

ಮಹೀಂದ್ರಾ ಲಾಜಸ್ಟಿಕ್ಸ್ ಸಂಸ್ಥೆಯಿಂದ ‘ಆಕ್ಸಿಜನ್‌ ಆನ್ ವೀಲ್ಸ್’ ಸೇವೆಗೆ ಚಾಲನೆ

Photo Credit :

ಮಹೀಂದ್ರಾ ಲಾಜಸ್ಟಿಕ್ಸ್ ಸಂಸ್ಥೆಯಿಂದ 'ಆಕ್ಸಿಜನ್‌ ಆನ್ ವೀಲ್ಸ್' ಸೇವೆಗೆ ಚಾಲನೆ

ಮುಂಬೈ: ಮಹೀಂದ್ರಾ ಲಾಜಿಸ್ಟಿಕ್ಸ್‌ ಸಂಸ್ಥೆಯು ‘ಆಕ್ಸಿಜನ್‌ ಆನ್‌ ವೀಲ್ಸ್‌’ ಸೇವೆಗೆ ಮಂಗಳವಾರ ಚಾಲನೆ ನೀಡಿದೆ.

ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಉಚಿತ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯಡಿ ಆಮ್ಲಜನಕ ಉತ್ಪಾದಕರು ಮತ್ತು ಆಸ್ಪತ್ರೆ, ಆರೋಗ್ಯ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸಲಾಗುವುದು.

ಈ ಸೇವೆಯು ಮಹಾರಾಷ್ಟ್ರದ ಮುಂಬೈ, ಠಾಣೆ, ಪುಣೆ, ಪಿಂಪ್ರಿ-ಚಿಂಚ್‌ವಾಡ್, ನಾಸಿಕ್‌, ನಾಗಪುರದಲ್ಲಿ ಲಭ್ಯವಿದೆ. ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯಡಿ ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತ್ವರಿತವಾಗಿ ತಲುಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಈ ಸೇವೆಗಾಗಿ ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ.

ಆಮ್ಲಜನಕ ಕೊರತೆಯನ್ನು ಎದುರಿಸುತ್ತಿರುವ ದೆಹಲಿಯಂತಹ ಇತರ ನಗರಗಳಲ್ಲೂ ಈ ಸೇವೆಯನ್ನು ವಿಸ್ತರಿಸುವ ಕುರಿತಾಗಿ ಆಯಾ ನಗರಗಳ ಸ್ಥಳೀಯ ಆಡಳಿತದೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ’ ಎಂದು ಮಹೀಂದ್ರಾ ಆಯಂಡ್‌ ಮಹೀಂದ್ರಾ ಸಂಸ್ಥೆ ಹೇಳಿದೆ.

‘ಕಳೆದ 48 ಗಂಟೆಗಳಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ನಾವು ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯ ಮೂಲಕ ಮನೆಗಳಲ್ಲಿರುವ ರೋಗಿಗಳಿಗೂ ಆಮ್ಲಜನಕ ವಿತರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಸಂಸ್ಥೆ ತಿಳಿಸಿದೆ.

‘ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯ ಮೂಲಕ ನಾವು ಆರೋಗ್ಯ ಕಾರ್ಯಕರ್ತರ ಮೇಲಿರುವ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕ ವಿತರಿಸುವ ಮೂಲಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತೇವೆ’ ಎಂದು ಮಹೀಂದ್ರಾ ಗ್ರೂಪ್‌ನ ಸಿಇಒ ಅನೀಶ್‌ ಶಾ ಅವರು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು