News Karnataka Kannada
Monday, April 22 2024
Cricket
ವಿದೇಶ

ಮಹಿಳೆಯರು, ಮಕ್ಕಳ ಮೇಲಾಗುತ್ತಿರುವ ಅನ್ಯಾಯ ಕೊನೆಗೊಳಿಸಿ: ಪ್ರಧಾನಿಗೆ ಸತ್ಯಾರ್ಥಿ ಮನವಿ

Photo Credit :

ಮಹಿಳೆಯರು, ಮಕ್ಕಳ ಮೇಲಾಗುತ್ತಿರುವ ಅನ್ಯಾಯ ಕೊನೆಗೊಳಿಸಿ: ಪ್ರಧಾನಿಗೆ ಸತ್ಯಾರ್ಥಿ ಮನವಿ

ನವದೆಹಲಿ: ‘ದೇಶದ ಹಲವೆಡೆ ಇಂದು ನಮ್ಮ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಪಾಯಕಾರಿ ಮಾತ್ರವಲ್ಲ, ಅದು ನಮ್ಮ ರಾಷ್ಟ್ರದ ಅವಮಾನ ಕೂಡ. ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಅನ್ಯಾಯಗಳನ್ನು ಕೊನೆಗೊಳಿಸಬೇಕು. ‘ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿಕೊಂಡರು.

ಇತ್ತೀಚೆಗಷ್ಟೇ ಜರುಗಿದ ಹಾಥರಸ್ ಅತ್ಯಾಚಾರ ಪ್ರಕರಣ ಮತ್ತು ದೇಶದಲ್ಲಿನ ಇತರ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಆದರಿಸಿ ಪ್ರತಿಕ್ರಿಯಿಸಿದ ಅವರು, ಅತ್ಯಾಚಾರದ ವಿರುದ್ಧ ಯುದ್ಧವನ್ನು ಪ್ರಧಾನಿಯವರೇ ಮುನ್ನಡೆಸಬೇಕು ಎಂದು ಆಗ್ರಹಿಸಿದರು.

‘ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳ ವಿರುದ್ಧದ ಯುದ್ಧದಲ್ಲಿ ನಮ್ಮ ಪುತ್ರಿಯರಿಗೆ ನಿಮ್ಮ ಬೆಂಬಲದ ಅಗತ್ಯವಿದೆ. ಇಡೀ ದೇಶವೇ ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಈ ಅತ್ಯಾಚಾರದ ವಿರುದ್ಧದ ಹೋರಾಟದ ನೇತೃತ್ವವನ್ನು ನೀವೇ ವಹಿಸಿಕೊಳ್ಳಬೇಕೆಂದು ನಾನು ನಿಮ್ಮಲ್ಲಿ ವಿನಯಪೂರ್ವಕವಾಗಿ ಯಾಚಿಸುತ್ತಿದ್ದೇನೆ. ಈ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ನಿಮಗಿದೆ ‘ ಎಂದು ಕೈಲಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಹೇಳಿದ್ದಾರೆ.

ಇದರೊಂದಿಗೆ ಆಗುತ್ತಿರುವ ಹಿಂಸಾಚಾರಗಳ ವಿರುದ್ಧ ಹೋರಾಡಲು ಹಾಗೂ ಅದನ್ನು ನಿರ್ಮೂಲನಗೊಳಿಸಲು ಚಳವಳಿಗೆ ಕರೆ ನೀಡುವುದರ ಜೊತೆಗೆ, ಈ ಹೋರಾಟಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯೆ ಇದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು