News Karnataka Kannada
Saturday, April 20 2024
Cricket
ವಿದೇಶ

ಮಹಾರಾಷ್ಟ್ರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಕೊರೊನಾ 3ನೇ ಅಲೆ, ಸಚಿವರ ಎಚ್ಚರಿಕೆ

Photo Credit :

ಮಹಾರಾಷ್ಟ್ರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಕೊರೊನಾ 3ನೇ ಅಲೆ, ಸಚಿವರ ಎಚ್ಚರಿಕೆ

ಮುಂಬೈ, : ಮಹಾರಾಷ್ಟ್ರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಕೊರೊನಾ 3ನೇ ಅಲೆ ಶುರುವಾಗಬಹುದು ಎಂದು ಸಚಿವ ರಾಜೇಶ್ ಟೋಪೆ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ಎರಡನೇ ಅಲೆಯಿಂದ ಮಹಾರಾಷ್ಟ್ರ ಈಗಾಗಲೇ ತೀವ್ರ ಸಂಕಷ್ಟಕ್ಕೆ ಎದುರಾಗಿದೆ, ಮಹಾರಾಷ್ಟ್ರದಲ್ಲಿ ಗುರುವಾರ 66,159 ಪ್ರಕರಣಗಳು ದಾಖಲಾಗಿದ್ದು, 771 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್ 19, ನಿರ್ವಹಣೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಗುರುವಾರ ಸಭೆ ನಡೆದಿದೆ. ಜಿಲ್ಲಾಧಿಕಾರಿಗಳು, ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೇ.15ರವರೆಗೂ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ರೀತಿಯ ನಿರ್ಬಂಧಗಳು ಮುಂದುವರೆಸಲು ನಿರ್ಧರಿಸಲಾಗಿದೆ.ತಜ್ಞರ ಪ್ರಕಾರ ಮಹಾರಾಷ್ಟ್ರವು ಜುಲೈ ಅಥವಾ ಆಗಸ್ಟ್‌ನಲ್ಲಿ ಕೊರೊನಾ ಮೂರನೇ ಅಲೆಯನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಆಮ್ಲಜನಕ ಉತ್ಪಾದನಾ ಘಟಕದ ಸ್ಥಾಪನೆ, ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ವ್ಯವಸ್ಥೆ, ಜಿಲ್ಲೆಗಳಿಗೆ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಮಷಿನ್‌ಗಳ ಸೌಲಭ್ಯವನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೋಪೆ ಹೇಳಿದ್ದಾರೆ.ಮೇ ಅಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಲಿದೆ. ಒಂದೊಮ್ಮೆ ಜೂನ್ ಅಥವಾ ಆಗಸ್ಟ್‌ ಹೊತ್ತಿಗೆ ಮೂರನೇ ಅಲೆ ಎದುರಾದರೆ , ಪರಿಸ್ಥಿತಿ ನಿರ್ವಹಣೆಯು ಒಂದು ಸವಾಲಾಗಿ ಪರಿಣಮಿಸಲಿದೆ.ಆ ವೇಳೆಗೆ ರಾಜ್ಯವು ವೈದ್ಯಕೀಯ ಆಮ್ಲಜನಕ ಪೂರೈಕೆಗಾಗಿ ಸ್ವಾಲಂಬಿಯಾಗುವತ್ತ ಪ್ರಯತ್ನ ನಡೆಸಲಿದೆ. ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಲಸಿಕೆ ನೀಡಲು ಕೊರತೆ ಎದುರಾಗಿದ್ದು, ರಾಜ್ಯಕ್ಕೆ 10 ಸಾವಿರದಿಂದ 15 ಸಾವಿರ ಕೊರತೆಯಿರುವುದಾಗಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು