News Karnataka Kannada
Wednesday, April 17 2024
Cricket
ವಿದೇಶ

ಮದುವೆ ಮಂಟಪ ದಾಳಿ : ದರ್ಪದ ಜಿಲ್ಲಾಧಿಕಾರಿ ಸಸ್ಪೆಂಡ್

Photo Credit :

ಮದುವೆ ಮಂಟಪ ದಾಳಿ : ದರ್ಪದ ಜಿಲ್ಲಾಧಿಕಾರಿ  ಸಸ್ಪೆಂಡ್

ಅಗರ್ತಲಾ : ತ್ರಿಪುರದ ಅಗರ್ತಲಾದಲ್ಲಿ ತಡರಾತ್ರಿ ನಡೆಯುತ್ತಿದ್ದ ಮದುವೆ ಸಮಾರಂಭಗಳಿಗೆ ದಾಳಿ ಮಾಡಿ ಜನರೊಂದಿಗೆ ಎರ್ರಾಬಿರ್ರಿ ನಡೆದುಕೊಂಡಿದ್ದ ಪಶ್ಚಿಮ ತ್ರಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್​ (ಡಿಎಂ) ಶೈಲೇಶ್​ ಕುಮಾರ್​ ಯಾದವ್​ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎನ್ನಲಾಗಿದೆ. ಕರೊನಾ ಕರ್ಫ್ಯೂ ಉಲ್ಲಂಘಿಸಿ ನಡೆಯುತ್ತಿತ್ತು ಎನ್ನಲಾದ ಮದುವೆಗಳ ಮೇಲಿನ ಡಿಎಂ ಯಾದವ್​ ಕಾರ್ಯಾಚರಣೆ ಬಗ್ಗೆ ತನಿಖೆಯನ್ನು ಕೂಡ ಆದೇಶಿಸಲಾಗಿದೆ.
ಎರಡು ದಿನಗಳ ಹಿಂದೆ, ಡಿಎಂ ಯಾದವ್, ಜನ ತುಂಬಿದ ಎರಡು ಮದುವೆ ಮಂಟಪಗಳಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ರೇಡ್ ಮಾಡಿ, ನೆರೆದಿದ್ದ ಜನಕ್ಕೆ ಕೂಡಲೇ ಜಾಗ ಖಾಲಿ ಮಾಡಲು ಹೇಳಿದ್ದರು. ವರನನ್ನು ಕುತ್ತಿಗೆ ಹಿಡಿದು ತಳ್ಳುವುದೂ ಸೇರಿದಂತೆ ಒರಟು ನಡವಳಿಕೆ ಪ್ರದರ್ಶಿಸಿದ್ದ ಯಾದವ್​, ಜನರನ್ನು ಬೈದಾಡುತ್ತಾ ತಮ್ಮೊಡನೆ ಮಾತಾಡಲು ಬಂದವರನ್ನೆಲ್ಲಾ ಅರೆಸ್ಟ್​ ಮಾಡಿ ಎನ್ನುತ್ತಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಧಿಕಾರದ ದರ್ಪ ತೋರಿಬಂದ ಈ ಘಟನೆಯ ಬಗ್ಗೆ ಹಲವು ಜನಪ್ರತಿನಿಧಿಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಯಾದವ್​ರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಕೋರಿದ್ದರು. ತದನಂತರ ಡಿಎಂ ಯಾದವ್ ಅವರು ತಾವು ಜನರ ಹಿತದೃಷ್ಟಿಯಿಂದ ಕರ್ಫ್ಯೂ ಪಾಲನೆ ಮಾಡುತ್ತಿದ್ದುದಾಗಿ ಹೇಳಿ ತಮ್ಮ ವರ್ತನೆಯ ಬಗ್ಗೆ ಕ್ಷಮೆ ಯಾಚಿಸಿದ್ದರು ಎನ್ನಲಾಗಿದೆ.ಈ ನಿಟ್ಟಿನಲ್ಲಿ ತ್ರಿಪುರ ಸಿಎಂ ಬಿಪ್ಲಬ್ ದೇಬ್ ಅವರು ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಂದ ವರದಿ ಕೇಳಿದ್ದರು. ಅದಕ್ಕಾಗಿ ಇಬ್ಬರು ಹಿರಿಯ ಐಎಎಸ್​ ಅಧಿಕಾರಿಗಳಾದ ಕಿರಣ್ ಗಿಟ್ಟೆ ಮತ್ತು ತನುಶ್ರೀ ದೇಬ್ಬರ್ಮ ಅವರನ್ನು ಡಿಎಂ ಯಾದವ್​ ಅವರು ಮದುವೆ ಮಂಟಪಗಳ ಮೇಲಿನ ಧಾಳಿಯ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡಲು ನೇಮಿಸಲಾಗಿದೆ. ಈ ನಡುವೆ ಡಿಎಂ ಯಾದವ್​ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಡಿಎಂ ಯಾದವ್ ದಾಳಿ ನಡೆಸಿ, ಅರ್ಧದಲ್ಲೇ ನಿಲ್ಲಿಸಿದ್ದ ಎರಡು ಮದುವೆ ಸಮಾರಂಭಗಳ ವರ ಮತ್ತು ವಧುಗಳ ಕುಟುಂಬಗಳನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಸಂಸದರ ತಂಡ ರಚಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು