News Karnataka Kannada
Monday, April 15 2024
Cricket
ವಿದೇಶ

ಮದುವೆಯಾಗಿ 72 ಗಂಟೆಯಲ್ಲೇ ಕೊರೊನಾಗೆ ನವವಿವಾಹಿತ ಬಲಿ!

Photo Credit :

ಮದುವೆಯಾಗಿ 72 ಗಂಟೆಯಲ್ಲೇ ಕೊರೊನಾಗೆ ನವವಿವಾಹಿತ ಬಲಿ!

ಬಿಜನೌರ್​​​: ಮೂರು ದಿನಗಳ ಹಿಂದೆ ಅವರಿಬ್ಬರಿಗೆ ಮದುವೆಯಾಗಿತ್ತು. ಹೆಂಡ್ತಿಯೊಂದಿಗೆ ಬದುಕಿ ಬಾಳಬೇಕಾಗಿದ್ದ ಆತ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾನೆ. .ಜಾಟಾನ್​ ನಿವಾಸಿ ಅರ್ಜುನ್​ ಜೊತೆ ಚಾಂದ್​ಪುರಿನ ಕಸ್ಬಾ ಸ್ಯಾಊ ನಿವಾಸಿ ಬಬಲಿ ಮದುವೆ ಇದೇ ಏಪ್ರಿಲ್‌ ೨೫ ರಂದು ನಡೆದಿತ್ತು. ಸಂಜೆ 7ಕ್ಕೆ ಮದುವೆ ಮುಗಿಸಿಕೊಂಡು ಯುವತಿ ಮನೆಯಿಂದ ಬಿಜನೌರ್​ಗೆ ಮದುವೆ ಕುಟುಂಬ ವಾಪಸಾಗಿತ್ತು. ಆ ದಿನ ರಾತ್ರಿಯಿಂದ ಅರ್ಜನ್​ಗೆ ತೀವ್ರ ಜ್ವರ ಉಲ್ಬಣವಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜನ್​ನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅರ್ಜುನ್​ಗೆ​ ಕೊರೊನಾ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿತು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೂ ಸಹ ಅರ್ಜುನ್​ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತು.
ಏಪ್ರಿಲ್​ 29ರಂದು ಆಕ್ಸಿಜನ್​ ಕೊರತೆಯಿಂದಾಗಿ ಅರ್ಜುನ್​ ಸಾವಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಎರಡೂ ಕುಟುಂಬ ಮೌನಕ್ಕೆ ಶರಣಾಯಿತು. ಮಗ ಮತ್ತು ಪತಿಯನ್ನು ಕಳೆದುಕೊಂಡ ಆ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೂರು ಕಾಲ ನಿನ್ನೊಂದಿಗೆ ಬಾಳುತ್ತೇನೆಂದು ಪ್ರಮಾಣ ಮಾಡಿ ಕೇವಲ 72 ಗಂಟೆಗಳಲ್ಲಿ ಪತ್ನಿಯನ್ನು ಒಂಟಿ ಮಾಡಿ ಯುವಕ ಬಾರದ ಲೋಕಕ್ಕೆ ತೆರಳಿದ್ದಾನೆ. ಗಂಡನನ್ನು ಕಳೆದುಕೊಂಡ ನವವಿವಾಹಿತೆಯ ಆರೋಗ್ಯದಲ್ಲೂ ಏರುಪೇರು ಕಂಡು ಬಂದಿದೆ. ಆಸ್ಪತ್ರೆ ಸಿಬ್ಬಂದಿ ಎರಡೂ ಕುಟುಂಬ ಮತ್ತು ಮದುವೆಯಲ್ಲಿ ಭಾಗಿಯಾದವರನ್ನು ಕೋವಿಡ್​ ಪರೀಕ್ಷೆಗೊಳಪಡಿಸಿ ಸ್ಯಾಂಪಲ್ಸ್​ ಪಡೆದಿದೆ. ವರದಿ ನೀರಿಕ್ಷಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು