News Karnataka Kannada
Friday, April 12 2024
Cricket
ವಿದೇಶ

ಮದುವೆಯಲ್ಲಿ ಗುಂಡು ಹಾರಿಸುವುದು; ಆಕೆಯ ವಿರುದ್ಧ ಎಫ್ಐಆರ್ ದಾಖಲು

Photo Credit :

ಮದುವೆಯಲ್ಲಿ ಗುಂಡು ಹಾರಿಸುವುದು; ಆಕೆಯ ವಿರುದ್ಧ ಎಫ್ಐಆರ್ ದಾಖಲು

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ವಿಚಿತ್ರವಾಗಿ ವಿವಾಹವಾಗುವುದು ಅಥವಾ ವಿವಾಹ ಸಮಾರಂಭದಲ್ಲಿ ಯಾವುದಾದರೂ ಒಂದು ವಿಚಿತ್ರ ಘಟನೆಗಳು ನಡೆಯುವುದು ಸರ್ವೇಸಾಮಾನ್ಯವಾಗಿವೆ. ಇಂತಹದೇ ಮತ್ತೊಂದು ಘಟನೆ ಉತ್ತರಪ್ರದೇಶದಲ್ಲಿ ಘಟಿಸಿದ್ದು ವಧುವಿನ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.

ಪ್ರತಾಪಗಢಲ್ಲಿ ಕಳೆದ ಭಾನುವಾರ ಮದುವೆ ನಡೆದಿದ್ದು, ಈ ಮದುವೆಯಲ್ಲಿ ರೂಪ ಪಾಂಡೆ ಎಂಬುವವರು ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ತನ್ನ ಸಂಬಂಧಿ ರಾಮವಾಸ್ ಪಾಂಡೆ ಎಂಬುವವರ ಪರವಾನಗಿ ಪಡೆದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದಾಳೆ.

ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದುತ್ತಿದ್ದಂತೆ ಇದನ್ನು ಗಮನಿಸಿದ ಪೊಲೀಸರು ವಧುವಿನ ಮೇಲೆ ಭಾರತೀಯ ದಂಡ ಸಂಹಿತಿ ಪ್ರಕಾರ ದೂರನ್ನು ದಾಖಲಿಸಿದ್ದಾರೆ.ಅಷ್ಟೇ ಅಲ್ಲದೆ ಆ ಬಂದೂಕಿನ ಪರವಾನಗಿಯನ್ನು ರದ್ದು ಮಾಡಲಾಗಿದೆ.

ಇನ್ನು ಮದುವೆ ಸಮಾರಂಭದಲ್ಲಿ ನಾಲ್ಕು ದೊಡ್ಡ ಗಾತ್ರದ ಕೇಕ್ ಗಳನ್ನು ಕತ್ತರಿಸಲಾಗಿದೆ. ಆ ವೇಳೆ ಗನ್ ಸದ್ದು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು