News Karnataka Kannada
Tuesday, April 16 2024
Cricket
ವಿದೇಶ

ಮಗಳ ಮುಂದಿನ ಭವಿಷ್ಯ ಚಿಂತೆಗೆ ತಾಯಿ ಆತ್ಮಹತ್ಯೆ

Photo Credit :

ಮಗಳ ಮುಂದಿನ ಭವಿಷ್ಯ ಚಿಂತೆಗೆ   ತಾಯಿ ಆತ್ಮಹತ್ಯೆ

ಖಾನಾಪುರ್​: ಮಗಳ ಭವಿಷ್ಯದ ಬಗ್ಗೆ ಹೆದರಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಾನಾಪುರ್​ನಲ್ಲಿ ನಡೆದಿದೆ. ತನ್ನ ಮಗಳನ್ನು ಅಂತರ್ಜಾತಿ ವಿವಾಹವಾದ ಅಳಿಯ ಮಗಳನ್ನು ತನ್ನ ಜತೆಗೆ ಕರೆದೊಯ್ಯದಿದ್ದರಿಂದ ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ, ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ.
ಈ ಘಟನೆ ಖಾನಪುರ್​ ವಲಯದ ಲಿಂಗಯ್ಯಪಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಇನ್ಸ್​ಪೆಕ್ಟರ್​ ತಾನಾಜಿ ನಾಯಕ್​, ಸತ್ತಯ್ಯ ಮತ್ತು ವರಲಕ್ಷಿ ದಂಪತಿಗೆ ಓರ್ವ ಮಗ ಮತ್ತು ಮಗಳಿದ್ದಾಳೆ. ಆರು ತಿಂಗಳ ಹಿಂದೆ ಮಗಳು ನಾಗಲಕ್ಷ್ಮಿ ಪ್ರೇಮಾ ರೊಟಿಗುಡ ಮೂಲದ ವೆಂಕಟೇಶ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂದು ಹೇಳಿದರು.ಕಳೆದ ಕೆಲವು ದಿನಗಳ ಹಿಂದೆ ಮಗಳನ್ನು ಮನೆಗೆ ಕರೆತಂದು ಬಿಟ್ಟು ಹೋದ ವರಲಕ್ಷ್ಮಿ ಅಳಿಯ ಮತ್ತೆ ಕರೆದುಕೊಂಡು ಹೋಗಲು ಬರಲೇ ಇಲ್ಲ. ಇದರಿಂದ ತೀವ್ರ ವಿಚಲಿತಗೊಂಡಿದ್ದ ವರಲಕ್ಷ್ಮಿ, ಮಗಳ ಮುಂದಿನ ಭವಿಷ್ಯ ಏನು ಎಂಬ ನೋವಿನಿಂದಲೇ ಭಾನುವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಸ್​ಐ ಮಾಹಿತಿ ನೀಡಿದರು.
ಘಟನೆ ಬೆನ್ನಲ್ಲೇ ವರಲಕ್ಷ್ಮಿ ಪತಿ ಸತ್ತಯ್ಯ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್​ಐ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು