News Karnataka Kannada
Thursday, April 18 2024
Cricket
ವಿದೇಶ

ಮಗನ ಮದುವೆಗೆ ಮೀಸಲಿಟ್ಟಿದ್ದ ಹಣವನ್ನು ಕೋವಿಡ್‌ ನಿರ್ವಹಣೆಗೆ ದಾನ ಮಾಡಿದ ರೈತ!

Photo Credit :

ಮಗನ ಮದುವೆಗೆ ಮೀಸಲಿಟ್ಟಿದ್ದ ಹಣವನ್ನು ಕೋವಿಡ್‌ ನಿರ್ವಹಣೆಗೆ ದಾನ ಮಾಡಿದ ರೈತ!

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಗ್ರಾಮದ ರೈತ ಮುಖಂಡ ಬಿ.ಜೆ.ದೇವರಾಜು ಎಂಬವರು ತನ್ನ ಮಗ ಬಿ.ಡಿ.ರತನ್‌ಗೌಡ ಅವರ ಮದುವೆಗಾಗಿ ಮೀಸಲಿಟ್ಟಿದ್ದ ಹಣವನ್ನು ಕೋವಿಡ್ ನಿರ್ವಹಣೆಗಾಗಿ ದಾನ ಮಾಡಿದ್ದಾರೆ.
ಶನಿವಾರ 2 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಶಾಸಕ ಕೆ.ಮಹದೇವ ಅವರ ಮೂಲಕ ತಹಸಿಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಹಸ್ತಾಂತರಿಸುವ ಮೂಲಕ ಮಾದರಿ ರೈತರಾಗಿದ್ದಾರೆ.
ಈ ವೇಳೆ ಮಾತನಾಡಿದ ಬಿ.ಜೆ.ದೇವರಾಜ್ ಅವರು, ನಮ್ಮ ಮಗನ ಮದುವೆಯನ್ನು ಕಳೆದ ಎರಡು ತಿಂಗಳ ಹಿಂದೆಯೇ ನಿಶ್ಚಯ ಮಾಡಿ ನಿಶ್ಚಿತಾರ್ಥ ಕೂಡ ಮಾಡಲಾಗಿತ್ತು. ಹತ್ತಾರು ಜನರಿಗೆ ಅನ್ನದಾನ ಮಾಡಿಸುವ ಬಯಕೆ ಹೊಂದುವ ಮೂಲಕ ದಿನಾಂಕ ನಿಗದಿಪಡಿಸಿದ್ದೆ. ಆದರೆ, ಕಳೆದ ಒಂದು ತಿಂಗಳಿನಿಂದ ಕೊರೊನಾ ಎರಡನೇ ಅಲೆ ದಿಢೀರನೆ ವಕ್ಕರಿಸಿದ ಕಾರಣ ನಾನು ಮಗನ ಮದುವೆಯನ್ನು ಮುಂದೂಡದೆ ಸರಳವಾಗಿ ನೆರವೇರಿಸಿ ಮದುವೆಗೆ ಮೀಸಲಿಟ್ಟ 2,05,001 ರೂ. ಚೆಕ್ ಅನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದರು.
ನಂತರ ಶಾಸಕ ಕೆ.ಮಹದೇವ್ ಮಾತನಾಡಿ, ಅದ್ದೂರಿ ಮದುವೆಗೆ ಹಾತೊರೆಯುವ ಈ ಕಾಲದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ತಮ್ಮ ಮಗನ ಮದುವೆಯನ್ನು ಸರಳವಾಗಿ ಮಾಡಿ ಆ ಹಣವನ್ನು ಕೋವಿಡ್ ನಿರ್ವಹಣೆಗೆ ನೀಡಿರುವ ಬಿ.ಜೆ.ದೇವರಾಜು ಅವರ ಕಾರ್ಯ ಶ್ಲಾಘನೀಯ. ಇದೇ ರೀತಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ತಮ್ಮ ಕೈಲಾದ ಸೇವೆಯನ್ನು ಸೋಂಕಿತರ ಹಿತಕ್ಕಾಗಿ ಮಾಡಬೇಕು ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು