News Karnataka Kannada
Sunday, April 21 2024
Cricket
ವಿದೇಶ

ಮಂಗಳವಾರ ಬೆಳಿಗ್ಗೆಯೇ ದೆಹಲಿಗೆ ಆಗಮಿಸಿದ ವಿಜಯೇಂದ್ರ

Photo Credit :

 ಮಂಗಳವಾರ ಬೆಳಿಗ್ಗೆಯೇ ದೆಹಲಿಗೆ ಆಗಮಿಸಿದ ವಿಜಯೇಂದ್ರ

ನವದೆಹಲಿ: ಸಿಎಂ ಬದಲಾವಣೆ ವದಂತಿ ಸುದ್ದಿಯ ನಡುವೆ ಇಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ದಿಢೀರ್ ದೆಹಲಿಗೆ ಆಗಮಿಸಿದ್ದಾರೆ.
ತನ್ನ ಆಪ್ತರೊಂದಿಗೆ ಇಂದು ಬೆಳಗ್ಗೆ 5:30ರ ವಿಮಾನದಲ್ಲಿ ವಿಜಯೇಂದ್ರ ದೆಹಲಿಗೆ ಆಗಮಿಸಿದ್ದು ಕುತೂಹಲ ಮೂಡಿಸಿದೆ. ದೇಶದಲ್ಲಿ ಕೋವಿಡ್ 19 ಇರುವ ರಾಜ್ಯಗಳಿಗೆ ಹೈಕಮಾಂಡ್ ನಾಯಕರು ಕೊರೊನಾ ನಿಯಂತ್ರಣದತ್ತ ಜಾಸ್ತಿ ಗಮನ ಹರಿಸಿ ಎಂದು ಸೂಚಿಸಿರುವಾಗ ವಿಜಯೇಂದ್ರ ದೆಹಲಿಗೆ ಆಗಮಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.
ಬಸನ ಗೌಡ ಪಾಟೀಲ್ ಅವರು ಈ ಹಿಂದೆಯೇ ನಾಯಕತ್ವ ಬದಲಾಗುತ್ತದೆ ಎಂದು ಹೇಳುತ್ತಾ ಬಂದಿದ್ದರು. ಉತ್ತರಾಖಂಡದಲ್ಲಿ ಸಿಎಂ ಬದಲಾವಣೆಯ ಬಳಿಕ ಪಂಜರಾಜ್ಯಗಳ ಚುನಾವಣೆಯ ಬಳಿಕ ಕರ್ನಾಟಕದಲ್ಲೂ ಸಿಎಂ ಬದಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.ಬಸನ ಗೌಡ ಪಾಟೀಲ್ ಅವರ ಬಂಡಾಯದ ಬಳಿಕ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಸಹ ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಯ ಉಳಿದ ನಾಯಕರು ಯೋಗೇಶ್ವರ್ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದರು.
ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು. ಅವರನ್ನು ಬದಲಾಯಿಸಿದರೆ ಆ ಸ್ಥಾನವನ್ನು ತುಂಬುವ ವ್ಯಕ್ತಿ ಯಾರು ಇಲ್ಲ. ನಾಯಕತ್ವ ಬದಲಾವಣೆ ವಿಚಾರ ಸುಳ್ಳು ಎಂದು ಮೂಡಿಗೆರೆಯ ಶಾಸಕ ಕುಮಾರಸ್ವಾಮಿ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಕೀಯದಲ್ಲಿ ಕೆಲವೊಮ್ಮೆ ಬೆಂಕಿ ಇಲ್ಲದೇ ಹೊಗೆ ಆಡುತ್ತದೆ. ಆಧಾರ ಇಲ್ಲದ ಸುದ್ದಿಗಳು ಬರುತ್ತದೆ ಎಂದು ಹೇಳಿ ನಾಯಕತ್ವ ಬದಲಾವಣೆ ಸುದ್ದಿ ವಿಚಾರವನ್ನು ಅಲ್ಲಗೆಳೆದಿದ್ದರು.
ಬಿಜೆಪಿ ನಾಯಕರ ಹೇಳಿಕೆಯಿಂದ ಕಳೆದ ವಾರ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಜೋರಾಗಿ ನಡೆದು ತಣ್ಣಗಾಗಿತ್ತು. ಈ ಚರ್ಚೆಗಳ ನಡುವೆ ಇಂದು ದಿಢೀರ್ ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದು ಈಗ ಯಾಕೆ ಎಂಬ ಕುತೂಹಲ ಮೂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು