News Karnataka Kannada
Sunday, April 14 2024
Cricket
ವಿದೇಶ

ಭಾರತೀಯ ಸೇನೆಯಿಂದ ಕಾಶ್ಮೀರದಲ್ಲಿ ಕೆಫೆ ಫ್ರೀಡಂ ಆರಂಭ

Photo Credit :

 ಭಾರತೀಯ ಸೇನೆಯಿಂದ ಕಾಶ್ಮೀರದಲ್ಲಿ  ಕೆಫೆ  ಫ್ರೀಡಂ ಆರಂಭ

ಶ್ರೀನಗರ: ಸದಾ ಮದ್ದುಗುಂಡುಗಳ ಸದ್ದು ಕೇಳಿಸುತ್ತಿದ್ದ ಉತ್ತರ ಕಾಶ್ಮೀರದ ಉರಿ ಸೆಕ್ಟರ್​ನ ಗಡಿನಿಯಂತ್ರಣ ರೇಖೆಯಲ್ಲಿ ಈಗ ನೆಮ್ಮದಿಯಿಂದ ಕಾಫಿ ಕುಡಿಯಲು ಅಡ್ಡಿ ಇಲ್ಲ. ಭಾರತೀಯ ಸೇನೆ ಉರಿ ಎಲ್​ಒಸಿಯ ‘ಕಮಾನ್ ಪೋಸ್ಟ್’ ಸಮೀಪ ‘ಕೆಫೆ ಫ್ರೀಡಂ’ ಎಂಬ ರೆಸ್ಟೋರೆಂಟ್​ಗೆ ಚಾಲನೆ ನೀಡಿದೆ. ಕಮಾನ್ ಪೋಸ್ಟ್​ಗೆ ಭೇಟಿ ನೀಡುವ ಜನರಲ್ಲಿ ವಿಶ್ವಾಸ ವೃದ್ಧಿಸುವ ಸಲುವಾಗಿ ಭಾರತೀಯ ಸೇನೆ ಈ ಕ್ರಮ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಕಮಾನ್ ಅಮಾನ್ ಸೇತು ಪೋಸ್ಟ್ ಸಮೀಪ ತಿರಂಗಾವನ್ನೂ ಹಾರಿಸಿದೆ. ಈ ಹೊಸ ಬೆಳವಣಿಗೆ ಉತ್ತರ ಕಾಶ್ಮೀರದ ಜನರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದೆ.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಕಾರಣವಾಗಬೇಕಾಗಿದ್ದ ಈ ಸೇತುವೆಯನ್ನು ಪಾಕಿಸ್ತಾನಿಗಳು ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಮಾದಕ ದ್ರವ್ಯ ಕಳ್ಳಸಾಗಣೆ, ಕಳ್ಳನೋಟು ದಂಧೆಗೆ ಬಳಸತೊಡಗಿದ್ದರು. ಈ ನಡುವೆ, ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹಳಸಿದ ಕಾರಣ 2019ರಲ್ಲಿ ಈ ಸೇತುವೆ ಬಂದ್ ಮಾಡಲಾಗಿತ್ತು.ಜಮ್ಮು – ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಡುವೆ ಸಂಪರ್ಕ ಸೇತುವೆ ಈ ‘ಕಮಾನ್ ಅಮಾನ್ ಸೇತು’. 2019ರಿಂದ ಇಲ್ಲಿ ಸಂಚಾರ ಬಂದ್ ಆಗಿತ್ತು. ಪರಸ್ಪರ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. 2,500ಕ್ಕೂ ಹೆಚ್ಚು ವ್ಯಾಪಾರಸ್ಥರು ಎರಡೂ ಕಡೆ ವ್ಯಾಪಾರ ವಹಿವಾಟು ಮಾಡುತ್ತಾರೆ. ಉರಿ-ಮುಜಾಫರಾಬಾದ್ ಮತ್ತು ಪೂಂಛ್ -ರಾವಲ್​ಕೋಟ್ ನಡುವೆ ಸಂಪರ್ಕ ರಸ್ತೆಗಳನ್ನು ಈ ಸೇತುವೆ ಜೋಡಿಸುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ನಡು ವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಇದು ನೆರವಾಗುತ್ತಿದೆ.
ಕಳೆದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಯಾಗಿದೆ. ಇದೇ ಕಾರಣಕ್ಕೆ ಉರಿ ಸೆಕ್ಟರ್​ನ ಕಮಾನ್ ಅಮಾನ್ ಸೇತುವೆ ಬಳಿ ಬರುವ ಜನರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸಕ್ಕೆ ಭಾರತೀಯ ಸೇನೆ ಮುಂದಾಯಿತು. ಹಾನಿಗೀಡಾಗಿದ್ದ ಸೇತುವೆಯನ್ನು ಮಾರ್ಚ್ ತಿಂಗಳಲ್ಲಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜತೆಗೆ ಪ್ರವಾಸಿಗರಿಗಾಗಿ ಸೇನೆಯೇ ಕೆಫೆ ಫ್ರೀಡಂ ಪ್ರಾರಂಭಿಸಿದೆ.
ಕಮಾನ್ ಪೋಸ್ಟ್ ಗೆ ಭೇಟಿ ನೀಡುವ ಪ್ರತಿಯೊಬ್ಬರೂ ಕೆಫೆ ಫ್ರೀಡಂಗೆ ಭೇಟಿ ನೀಡಿ ಎಲ್​ಒಸಿ ನೋಡುತ್ತ ಕಪ್ ಕಾಫಿ ಹೀರುವಷ್ಟು ಇಲ್ಲಿನ ಪರಿಸ್ಥಿತಿ ತಿಳಿಯಾಗಿದೆ. ಬಳಿಕ ಸೇತುವೆ ಬಳಿ ಹೋಗಿ ಸೆಲ್ಪಿ ಕೂಡ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು