News Karnataka Kannada
Saturday, April 20 2024
Cricket
ವಿದೇಶ

ಭಾರತದ 10 ಜಿಲ್ಲೆಗಳಲ್ಲೇ ಶೇ.25ರಷ್ಟು ಕೊರೊನಾ ಸಕ್ರಿಯ ಪ್ರಕರಣ

Photo Credit :

ಭಾರತದ 10 ಜಿಲ್ಲೆಗಳಲ್ಲೇ ಶೇ.25ರಷ್ಟು ಕೊರೊನಾ ಸಕ್ರಿಯ ಪ್ರಕರಣ

ನವದೆಹಲಿ, : ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ನಿಯಂತ್ರಣವನ್ನೂ ಮೀರಿ ಹರಡುತ್ತಿದೆ. ನಿರಂತರವಾಗಿ ಎರಡನೇ ದಿನವೂ ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 4 ಲಕ್ಷದ ಗಡಿ ದಾಟಿದೆ.ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,14,188 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಂದೇ ದಿನ 3,915 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 3,31,507 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 2,14,91,598 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1,76,12,351 ಸೋಂಕಿತರು ಗುಣಮುಖರಾಗಿದ್ದು, 2,34,083 ಮಂದಿ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ 36,45,164 ಕೊವಿಡ್-19 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.25ರಷ್ಟು ಸಕ್ರಿಯ ಪ್ರಕರಣಗಳು ಕೇವಲ 10 ಜಿಲ್ಲೆಗಳಿಗೆ ಸೇರಿದ್ದು, ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಭಾರತದಲ್ಲಿ ಒಟ್ಟು 36,45,164 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಶೇ.25ರಷ್ಟು ಸಕ್ರಿಯ ಪ್ರಕರಣಗಳು ಕೇವಲ 10 ಜಿಲ್ಲೆಗಳಿಗೆ ಸೇರಿರುವುದು ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಬೆಂಗಳೂರು ನಗರ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಶೇ.9.13ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಪುಣೆ, ದೆಹಲಿ, ಅಹ್ಮದಾಬಾದ್, ಎರ್ನಾಕುಲಂ, ನಾಗ್ಪುರ್, ಮುಂಬೈ, ಕೋಲ್ಕತ್ತಾ, ಜೈಪುರ್ ಮತ್ತು ಠಾಣೆ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು