News Karnataka Kannada
Sunday, April 14 2024
Cricket
ವಿದೇಶ

ಭಾರತದ ಲಸಿಕೆಗಳು ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ: ಡಬ್ಲ್ಯೂ ಎಚ್ ಒ

Photo Credit :

ಭಾರತದ ಲಸಿಕೆಗಳು ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ: ಡಬ್ಲ್ಯೂ ಎಚ್ ಒ

ನವದೆಹಲಿ : ಭಾರತದಲ್ಲಿ ಲಸಿಕೆಗಳು , ಚಿಕಿತ್ಸಕ ಮತ್ತು ರೋಗನಿರ್ಣಯ ಪರಿಣಾಮಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ( WHO ) ಯ ಭಾರತದ ಪ್ರತಿನಿಧಿ ಸ್ಪಷ್ಟಪಡಿಸಿದ್ದಾರೆ .

 

ನೆನ್ನೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆ, ಭಾರತದಲ್ಲಿ ಪತ್ತೆಯಾಗಿರುವ ಕೊರೋನಾವೈರಸ್’ನ B.1.617 ರೂಪಾಂತರಿ ಹೆಚ್ಚು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿತ್ತು. ಆದರ ಬೆನ್ನಲ್ಲೇ ಇದೀಗ, ಜಾಗತಿಕವಾಗಿ ತಜ್ಞರೊಂದಿಗಿನ ಚರ್ಚೆಗಳ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆಗೆ ಇದುವರೆಗೆ ತಿಳಿದಿರುವ ಮಾಹಿತಿ ಆಧರಿಸಿ ಭಾರತೀಯ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿತ್ವದ ಕುರಿತು ಡಾ . ರೆಡೆರಿಕೊ ಎಚ್ . ಆಫ್ರಿನ್ ಹೇಳಿಕೆ ನೀಡಿದ್ದಾರೆ . 

 

ಭಾರತದಲ್ಲಿ ಕೊರೊನಾವೈರಸ್ ಕಾಯಿಲೆಯ ಎರಡನೇ ಅಲೆಗೆ ಕಾರಣ ಎಂದು ನಂಬಲಾಗಿರುವ ಬಿ .1.617 ರೂಪಾಂತರಿಯು ಜಾಗತಿಕ ಕಳವಳದ ರೂಪಾಂತರವೆಂದು ವರ್ಗೀಕರಿಸಲ್ಪಟ್ಟ ನಾಲ್ಕನೇ ರೂಪಾಂತರವಾಗಿದೆ . ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್ -19 ತಂಡಗಳು ಮತ್ತು ನಮ್ಮ ಲ್ಯಾಬ್ ತಂಡಗಳು ಆಂತರಿಕವಾಗಿ , ಬಿ 1.617 ರ ಹೆಚ್ಚಿನ ಪ್ರಸರಣವನ್ನು ಸೂಚಿಸಲು ಕೆಲವು ಲಭ್ಯವಿರುವ ಮಾಹಿತಿಯನ್ನು ಹೊಂದಿವೆ . 

 

ಆದ್ದರಿಂದ ನಾವು ಇದನ್ನು ಜಾಗತಿಕ ಮಟ್ಟದಲ್ಲಿ ಕಳಕಳಿಯ ರೂಪಾಂತರವೆಂದು ವರ್ಗೀಕರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ . ಭಾರತದಲ್ಲಿ ಪ್ರತಿದಿನ ದಾಖಲಾಗುವ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಮತ್ತು ಮರಣ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ . ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ನೈಜ ಸಂಖ್ಯೆಗಳನ್ನು ವರದಿ ಮಾಡುವಂತೆ ಸರ್ಕಾರಗಳಿಗೆ ಕರೆ ನೀಡಿದರು . ಸೋಂಕುಗಳ ಪ್ರಮಾಣ ಮತ್ತು ಸಾವುನೋವುಗಳು ಚಿಂತಾಜನಕ . ಈ ಸಮಯದಲ್ಲಿ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ .

 

ಇನ್ನು ಈ ರೂಪಂತರಿ ಕೊರೋನಾ ವೈರಸ್ ರಾಜ್ಯದಲ್ಲಿ ದಾಳಿ ಮಾಡಲು ಆರಂಭಿಸಿದ್ದು, ಹೊಸದಾಗಿ 86 ಮಂದಿಯಲ್ಲಿ ಈ ಹೊಸ ವೈರಸ್ ಪತ್ತೆಯಾಗಿದೆ . ಏಪ್ರಿಲ್ 27 ರಂದು ಆರಂಭದಲ್ಲಿ 20 ಮಂದಿಯಲ್ಲಿ ಈ ಹೊಸ ವೈರಸ್ ಪತ್ತೆಯಾಗಿತ್ತು . ಬಳಿಕ ಐದು ದಿನಗಳ ಬಳಿಕ 42 ಮಂದಿಯಲ್ಲಿ ರೂಪಾಂತರಿ ವೈರಸ್ ನ ಲಕ್ಷಣ ಕಂಡು0 ಬಂದಿತ್ತು . ಇದೀಗ ಮತ್ತೆ ಹೊಸದಾಗಿ 86 ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿದೆ . ವಿಶ್ವ ಆರೋಗ್ಯ ಸಂಸ್ಥೆ ಕೂಡ ಭಾರತದ ಈ ರೂಪಾಂತರಿ ಕೊರೋನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದೆ . 30 ದೇಶಗಳಿಗೆ ಇದು ಹರಡಿದೆ ಎಂದು ಬಹಿರಂಗಪಡಿಸಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು