News Karnataka Kannada
Sunday, April 14 2024
Cricket
ವಿದೇಶ

ಭಾರತದ ಪರಿಸ್ಥಿತಿ ಕಳವಳಕಾರಿ ; ಡಾ ವಿವೇಕ್‌ ಮೂರ್ತಿ

Photo Credit :

ಭಾರತದ ಪರಿಸ್ಥಿತಿ ಕಳವಳಕಾರಿ ; ಡಾ ವಿವೇಕ್‌ ಮೂರ್ತಿ

ವಾಷಿಂಗ್ಟನ್‌: ಭಾರತದಲ್ಲಿ ಕೋವಿಡ್‌–19 ಪಿಡುಗು ಭಾರಿ ಹಾನಿಯನ್ನುಂಟು ಮಾಡುತ್ತಿದ್ದು, ಈ ಪಿಡುಗಿನಿಂದ ಸಂಭವಿಸುತ್ತಿರುವ ಸಾವು–ನೋವಿನ ವರದಿಗಳು ಭಯಾನಕ ಹಾಗೂ ಹೃದಯ ಹಿಂಡುವಂತಿವೆ ಎಂದು ಅಮೆರಿಕದ ಸರ್ಜನ್‌ ಜನರಲ್‌ ಆಗಿರುವ ಭಾರತ ಮೂಲದ ವಿವೇಕ್‌ ಮೂರ್ತಿ ಹೇಳಿದ್ದಾರೆ.ಎರಡನೇ ಬಾರಿಗೆ ದೇಶದ ವೈದ್ಯಕೀಯ ಸೇವೆಯ ಅತ್ಯುನ್ನತ ಹುದ್ದೆಗೇರಿದ ಹೆಗ್ಗಳಿಕೆ ಹೊಂದಿರುವ ವಿವೇಕ್‌ ಮೂರ್ತಿ, ಕೋವಿಡ್‌ನಿಂದಾಗಿ ತಮ್ಮ ಕುಟುಂಬದ ಏಳು ಜನರನ್ನು ಕಳೆದುಕೊಂಡಿದ್ದಾರೆ.
‘ಭಾರತದಲ್ಲಿರುವ ನಮ್ಮ ಕುಟುಂಬದ ಸದಸ್ಯರೊಂದಿಗೆ ನಿತ್ಯವೂ ಮಾತನಾಡುತ್ತಿರುವೆ. ಅವರು ಬಹಳಷ್ಟು ಯಾತನೆ ಅನುಭವಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಇನ್ನೆಂದೂ ಬರದಿರಲಿ ಎಂದೇ ಎಲ್ಲರೂ ಪ್ರಾರ್ಥಿಸುವಂತಾಗಿದೆ’ ಎಂದು ಅವರು ಮಾಧ್ಯಮಗಳಿಗೆ ಹೇಳಿದರು.‘ನಿತ್ಯ 3.50 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳು ಭರ್ತಿಯಾಗಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ತೀವ್ರವಾಗಿ ಅಸ್ವಸ್ಥರಾದವರಿಗೆ ಆಮ್ಲಜನಕ ಪೂರೈಕೆ ಸಾಧ್ಯವಾಗುತ್ತಿಲ್ಲ. ಬಹಳ ಸಂಕಷ್ಟದ ಪರಿಸ್ಥಿತಿ ಮನೆ ಮಾಡಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಸಂಕಷ್ಟದ ಈ ಸಮಯದಲ್ಲಿ ಭಾರತಕ್ಕೆ ಅಮೆರಿಕ ನೆರವು ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು