News Karnataka Kannada
Sunday, April 21 2024
Cricket
ವಿದೇಶ

ಭಾರತದಲ್ಲಿ 9.27 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಕಂಡುಬಂದ ಅಪೌಷ್ಟಿಕತೆ

Photo Credit :

ಭಾರತದಲ್ಲಿ 9.27 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಕಂಡುಬಂದ ಅಪೌಷ್ಟಿಕತೆ

ನವದೆಹಲಿ: ಕೋವಿಡ್-19 ಆತಂಕದ ನಡುವೆ ಇದೀಗ ಹೊಸ ಆತಂಕವನ್ನು ಸೃಷ್ಟಿಸಿದ್ದು, ಭಾರತದಲ್ಲಿ 9.27 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ.

 

6 ತಿಂಗಳಿನಿಂದ 6 ವರ್ಷಗಳವರೆಗಿನ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದ್ದು, ನವೆಂಬರ್ ತಿಂಗಳವರೆಗೂ 9,27,606 ಮಕ್ಕಳು ಈ ಸಮಸ್ಯೆಯಿಂದ ಬಳುತ್ತಿರುವುದು ಪತ್ತೆಯಾಗಿದೆ ಎಂದು ಆರ್ ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿದೆ.

 

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ ರಾಜ್ಯ ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ಅಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಹೊಸ ಆತಂಕ ಮೂಡಿದೆ.

 

9 ಲಕ್ಷ ಮಕ್ಕಳ ಪೈಕಿ ಉತ್ತರ ಪ್ರದೇಶದಲ್ಲಿ 3,98,359 ಮಕ್ಕಳು ಹಾಗೂ ಬಿಹಾರದಲ್ಲಿ 2,79,427 ಮಕ್ಕಳು ಅಪೌಷ್ಟಿಕತೆ ಹೊಂದಿದ್ದರೆ, ಲಡಾಖ್, ಲಕ್ಷದ್ವೀಪ, ನಾಗಾಲ್ಯಾಂಡ್, ಮಣಿಪುರ, ಮಧ್ಯಪ್ರದೇಶಗಳಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಪ್ರಮಾಣದಲ್ಲಿದೆ. ಲಡಾಖ್ ನ್ನು ಹೊರತುಪಡಿಸಿ, ಮಧ್ಯಪ್ರದೇಶವೂ ಸೇರಿ ಉಳಿದ ನಾಲ್ಕು ರಾಜ್ಯಗಳ ಅಂಗನವಾಡಿ ಕೇಂದ್ರಗಳಿಂದ ಈ ಸಂಬಂಧ ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಆರ್ ಟಿಐ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು