News Karnataka Kannada
Tuesday, April 23 2024
Cricket
ವಿದೇಶ

ಭಾರತಕ್ಕೆ 740 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ ಕಳಿಸಿದ ಅಮೆರಿಕ

Photo Credit :

ಭಾರತಕ್ಕೆ  740 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ  ಕಳಿಸಿದ ಅಮೆರಿಕ

ವಾಷಿಂಗ್ಟನ್‌: ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹ 740 ಕೋಟಿ ಮೌಲ್ಯದ (100 ದಶಲಕ್ಷ ಡಾಲರ್‌) ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುವುದು. ಈ ಪೈಕಿ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಭಾರತದತ್ತ ಪ್ರಯಾಣ ಬೆಳಸಿದೆ ಎಂದು ಶ್ವೇತಭವನ ತಿಳಿಸಿದೆ.ವಿಶ್ವದ ಬೃಹತ್‌ ಯುದ್ಧವಿಮಾನವು ಟ್ರಾವಿಸ್‌ ವಾಯುನೆಲೆಯಿಂದ ಪ್ರಯಾಣ ಆರಂಭಿಸಿದೆ ಎಂದು ಯುಎಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲೆಪ್‌ಮೆಂಟ್‌ ಹೇಳಿದೆ.
ಈ ಪರಿಹಾರ ಸಾಮಗ್ರಿಗಳನ್ನು ಕ್ಯಾಲಿಫೋರ್ನಿಯಾ ರಾಜ್ಯ ನೀಡಿದೆ. 440 ಆಮ್ಲಜನಕ ಸಿಲಿಂಡರ್‌ಗಳು, ನಿಯಂತ್ರಕಗಳು, 9,60,000 ರ‍್ಯಾಪಿಡ್‌ ಡಯಾಗ್ನೊಸ್ಟಿಕ್‌ ಟೆಸ್ಟ್‌ ಕಿಟ್‌ಗಳು, 1 ಲಕ್ಷ ಎನ್‌–95 ಮಾಸ್ಕ್‌ಗಳನ್ನು ಈ ಮೊದಲ ವಿಮಾನ ಹೊತ್ತೊಯ್ದಿದೆ ಎಂದು ಸಂಸ್ಥೆ ತಿಳಿಸಿದೆ.‘ಬರುವ ದಿನಗಳಲ್ಲಿ ಆಕ್ಸಿಜನ್‌ ಜನರೇಶನ್ ಯುನಿಟ್‌ (ಪಿಎಸ್‌ಎ ಸಿಸ್ಟಂಸ್‌), 1.5 ಕೋಟಿ ಎನ್‌–95 ಮಾಸ್ಕ್‌ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ಭಾರತಕ್ಕೆ ನೀಡಲಾಗುತ್ತದೆ’ ಎಂದೂ ಶ್ವೇತಭವನ ಪ್ರಕಟಣೆ ತಿಳಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು