News Karnataka Kannada
Monday, April 22 2024
Cricket
ವಿದೇಶ

ಬ್ಲ್ಯಾಕ್ ಫಂಗಸ್: ಏಮ್ಸ್ ನಿಂದ ಚಿಕಿತ್ಸಾ ಮಾರ್ಗಸೂಚಿ ಶೀಘ್ರದಲ್ಲೇ ಬಿಡುಗಡೆ

Photo Credit :

ಬ್ಲ್ಯಾಕ್ ಫಂಗಸ್: ಏಮ್ಸ್ ನಿಂದ ಚಿಕಿತ್ಸಾ ಮಾರ್ಗಸೂಚಿ  ಶೀಘ್ರದಲ್ಲೇ ಬಿಡುಗಡೆ

ನವದೆಹಲಿ: ಮಾರಕ ಕೊರೋನಾ ವೈರಸ್ 2ನೇ ಅಲೆ ವೇಳೆ ಕೋವಿಡ್ ಗಿಂತಲೂ ಹೆಚ್ಚು ಭೀತಿ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಸೋಂಕು ಕುರಿತಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಚಿಕಿತ್ಸಾ ವಿಧಾನದ ಮಾರ್ಗ ಸೂಚಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಏಮ್ಸ್ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿದ್ದು, ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಶಿಲೀಂಧ್ರಗಳ ಸೋಂಕಿನಿಂದ ಉಂಟಾಗುವ ಒಂದು ಸಮಸ್ಯೆಯಾಗಿದ್ದು, ಪರಿಸರದಲ್ಲಿನ ಶಿಲೀಂಧ್ರ ಬೀಜಕಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಜನರು ಮ್ಯೂಕೋರ್ಮೈಕೋಸಿಸ್ ಸೋಂಕಿಗೆ ತುತ್ತಾಗುತ್ತಾರೆ. ಕತ್ತರಿಸಿದ ಚರ್ಮ, ಸುಟ್ಟಗಾಯ, ಇತರೆ ಚರ್ಮದ ಮೂಲಕ ಈ ಸೋಂಕು ದೇಹದ ಒಳಗೆ ಪ್ರವೇಶಿಸುತ್ತದೆ. ಅಲ್ಲದೆ ಗಾಳಿಯ ಮುಖಾಂತರವೂ ಇದು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಳಿಕ ಇದಜು ಚರ್ಮದ ಮೇಲೆ ಬೆಳೆದು, ಸೋಂಕಿತರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನಲಾಗಿದೆ.
ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡ ರೋಗಿಗಳಲ್ಲಿ ಈ ರೋಗವನ್ನು ಕಂಡುಹಿಡಿಯಲಾಗುತ್ತಿದೆ. ಇದಲ್ಲದೆ, ಮಧುಮೇಹ ಮತ್ತು ಅವರ ರೋಗ ನಿರೋಧಕ ಶಕ್ತಿ ಸರಿಯಾಗಿ ಕಾರ್ಯನಿರ್ವಹಿಸದ ಯಾರಾದರೂ ಈ ಸೋಂಕಿಗೆ ತುತ್ತಾಗಬಲ್ಲರು. ಹೆಚ್ಚಾಗಿ ಮಣ್ಣಿನಲ್ಲಿ ಈ ಶಿಲೀಂದ್ರಗಳು ಕಂಡುಬರುತ್ತದೆ. ಅಲ್ಲದೆ ಎಲೆಗಳು, ಕಾಂಪೋಸ್ಟ್ ಮತ್ತು ರಾಶಿಗಳಂತಹ ಕೊಳೆಯುತ್ತಿರುವ ಸಾವಯವ ಪದಾರ್ಥಗಳಲ್ಲಿ ಇದು ಕಂಡುಬರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು