News Karnataka Kannada
Sunday, April 14 2024
Cricket
ವಿದೇಶ

ಬೆಂಗಳೂರಿನಲ್ಲಿ ಕೊರೋನ ನಿಗ್ರಹಕ್ಕೆ ಹೋಂ ಐಸೋಲೇಷನ್‌ ರದ್ದಿಗೆ ಸರ್ಕಾರ ಚಿಂತನೆ

Photo Credit :

ಬೆಂಗಳೂರಿನಲ್ಲಿ  ಕೊರೋನ ನಿಗ್ರಹಕ್ಕೆ ಹೋಂ ಐಸೋಲೇಷನ್‌ ರದ್ದಿಗೆ ಸರ್ಕಾರ ಚಿಂತನೆ

ಬೆಂಗಳೂರು, : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಜೂನ್ 7ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ. ಇದರ ಜೊತೆಗೆ ಸೋಂಕು ಇಳಿಮುಖವಾಗದ ಹಿಂದಿನ ಕಾರಣವನ್ನು ಕಲೆ ಹಾಕುವ ಕೆಲಸ ನಡೆಸಲಾಗುತ್ತಿದ್ದು, ಹೋಂ ಐಸೊಲೇಷನ್‌ಗೆ ಅವಕಾಶ ನೀಡಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಪರೋಕ್ಷ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಹೋಂ ಐಸೊಲೇಷನ್‌ಗೆ ತಿಲಾಂಜಲಿ ಇಡಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಹೋಂ ಐಸೊಲೇಷನ್ ನಿಂದ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಕಳೆದ ಕೆಲ ದಿನಗಳಿಂದ ಹೋಂ ಐಸೊಲೇಷನ್‌ನಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪಪ್ಪಿರುವುದು ವರದಿಯಾಗಿದೆ. ಹೀಗಾಗಿ ಹೋಂ ಐಸೊಲೇಷನ್ ಬದಲಾಗಿ ಕೋವಿಡ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಲು ಚಿಂತನೆ ನಡೆಸಲಾಗುತ್ತಿದೆ. ಹೋಂ ಐಸೊಲೇಷನ್ ನಲ್ಲಿರುವರು ಬೇಕಾಬಿಟ್ಟಿ ಹೊರಗಡೆ ಬಂದು ಸೋಂಕು ಹರಡಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಸೋಂಕಿನ ಪ್ರಮಾಣ ಕುಗ್ಗಿಸಲು ಹೋಂ ಐಸೊಲೇಷನ್‌ಗೆ ಬ್ರೇಕ್ ಹಾಕಲು ಯೋಚಿಸಲಾಗುತ್ತಿದೆ.
ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಕುರಿತು ಬಿಬಿಎಂಪಿ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಹೋಂ ಐಸೊಲೇಷನ್‌ನಲ್ಲಿದ್ದ 778 ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು