News Karnataka Kannada
Sunday, April 21 2024
Cricket
ವಿದೇಶ

ಬೆಂಗಳೂರನ್ನು ಉದ್ಯಾನನಗರಿಯಾಗಿ ಬದಲಿಸಿದ್ದ ಖ್ಯಾತ ನಿವೃತ್ತ ಐಎಫ್ಎಸ್ ಅಧಿಕಾರಿ ಎಸ್‌ಜಿ ನೆಗಿನ್ಹಾಲ್ ನಿಧನ

Photo Credit :

ಬೆಂಗಳೂರನ್ನು ಉದ್ಯಾನನಗರಿಯಾಗಿ ಬದಲಿಸಿದ್ದ ಖ್ಯಾತ ನಿವೃತ್ತ ಐಎಫ್ಎಸ್ ಅಧಿಕಾರಿ ಎಸ್‌ಜಿ ನೆಗಿನ್ಹಾಲ್ ನಿಧನ

ಬೆಂಗಳೂರು: ಖ್ಯಾತ ನಿವೃತ್ತ ಐಎಫ್ಎಸ್ ಅಧಿಕಾರಿ, ಬೆಂಗಳೂರು ನಗರದ ಹಸಿರೀಕರಣದಲ್ಲಿ, ಉದ್ಯಾನನಗರಿ ಎಂಬ ಬಿರುದಿಗೆ ಪ್ರಮುಖ ಕಾರಣೀಭೂತರಾದ ಎಸ್‌ಜಿ ನೆಗಿನ್ಹಾಲ್ ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ.ಅವರಿಗೆ 92 ವರ್ಷ ವಯಸ್ಸಾಗಿತ್ತು.
ಬೆಂಗಳೂರನ್ನು ಗಾರ್ಡನ್ ಸಿಟಿಯಾಗಿ ಬದಲಾಯಿಸುವಲ್ಲಿ ನೆಗಿನ್ಹಾಲ್ ಪ್ರಮುಖ ಪಾತ್ರ ವಹಿಸಿದ್ದರು. 1980ರ ದಶಕದಲ್ಲಿ ಬೆಂಗಳೂರು ನಗರ ತನ್ನ ಹಸಿರು ನೋಟವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿತ್ತು. ನಗರೀಕರಣ, ಆಧುನೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಹೊಸ ಲೇ ಔಟ್ ಗಳು ತಲೆಯೆತ್ತುತ್ತಿದ್ದವು.ಮರಗಳು ಕಡಿಯುತ್ತಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂ ರಾವ್ ಮರಗಳನ್ನು ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಸಂಪರ್ಕಿಸಿ ಸಲಹೆ ಕೇಳಿದ್ದು ಸೇತುರಾಮ್ ಗೋಪಾಲ್ ರಾವ್ ನೆಗಿನ್ಹಾಳ್ ಅವರನ್ನು.
ಆಗಲೇ ಅವರು ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಿಕೊಂಡು ಹೋದ ಬಗ್ಗೆ ಹೆಸರು ಮಾಡಿದ್ದರು, ಖ್ಯಾತ, ಕೆಲಸದ ಬಗ್ಗೆ ಶ್ರದ್ಧೆ ಹೊಂದಿದ್ದ ಅರಣ್ಯಾಧಿಕಾರಿ ಎಂದು ಹೆಸರು ಗಳಿಸಿದ್ದ ಎಸ್ ಜಿ ನೆಗಿನ್ಹಾಲ್ ಅವರ ಸಲಹೆಯನ್ನು ಕೇಳಿದರಂತೆ.ಕೂಡಲೇ ನೆಗಿನ್ಹಾಲ್ ಕಾರ್ಯಪ್ರವೃತ್ತರಾಗಿ ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ತಂದು 15 ನರ್ಸರಿಗಳ ಮೂಲಕ ಬೆಂಗಳೂರು ನಗರದಲ್ಲಿ 6 ಕೋಟಿಗೂ ಅಧಿಕ ಗಿಡಗಳನ್ನು ನೆಟ್ಟರು. ಗಿಡ ಬೇಗನೆ ಬೆಳೆಯಲು ವಿಶೇಷ ತಂತ್ರಜ್ಞಾನದ ಮೂಲಕ ಮಣ್ಣಿನ ಪೋಷಣೆ ಮಾಡಿದ್ದರು. ಇದರಿಂದ ಮತ್ತೆ ಬೆಂಗಳೂರು ನಗರ ಹಸಿರಿನಿಂದ ಕಂಗೊಳಿಸಿ ಉದ್ಯಾನನಗರಿ ಎಂಬ ಕೀರ್ತಿ ಬೆಳೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು