News Karnataka Kannada
Tuesday, April 23 2024
Cricket
ವಿದೇಶ

ಬಲೂಚಿಸ್ತಾನದಲ್ಲಿ ಹಿಂದೂ ವರ್ತಕರಿಗೆ ಬೆದರಿಕೆ

Photo Credit :

ಬಲೂಚಿಸ್ತಾನದಲ್ಲಿ ಹಿಂದೂ ವರ್ತಕರಿಗೆ ಬೆದರಿಕೆ

ಬಲೂಚಿಸ್ತಾನ: ಖುಜ್ದಾರ್‌ ಜಿಲ್ಲೆಯ ವಾಧ್‌ ಮಾರುಕಟ್ಟೆಯಲ್ಲಿ ಉದ್ಯಮಿ ಅಶೋಕ್‌ ಕುಮಾರ್‌ ಎಂಬುವವರನ್ನು ಕಳೆದವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬಳಿಕ ಇದೀಗ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಹಿಂದೂ ವರ್ತಕರು ಮತ್ತು ಅಂಗಡಿ ಮಾಲೀಕರಿಗೆ ಅಪರಿಚಿತ ವ್ಯಕ್ತಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಮಾರುಕಟ್ಟೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂಚನಾ ಫಲಕಗಳಲ್ಲಿ ಅಪರಿಚಿತರು ಶನಿವಾರ ಕರಪತ್ರಗಳನ್ನು ಅಂಟಿಸಿದ್ದಾರೆ. ಕರಪತ್ರದಲ್ಲಿ, ʼಮಹಿಳಾ ಗ್ರಾಹಕರು ತಮ್ಮ ಅಂಗಡಿಗಳಿಗೆ ಪ್ರವೇಶಿಸಲು ಅವಕಾಶ ನೀಡಿದರೆ, ಸ್ಥಳೀಯ ಹಿಂದೂ ವ್ಯಾಪಾರಿಗಳು ಗಂಭೀರ ಪರಿಣಾಮಗಳನ್ನು ಎದುರಿಸಲಿದ್ದಾರೆʼ ಎಂದು ಬೆದರಿಕೆಯೊಡ್ಡಲಾಗಿದೆ ಎಂದು ಪಾಕಿಸ್ತಾನದ ಕೆಲ ಪ್ರತಿಕೆಗಳಲ್ಲಿ ವರದಿಯಾಗಿದೆ.
ಅಶೋಕ್‌ ಕುಮಾರ್‌ ಹತ್ಯೆಯ ವಿರುದ್ಧ ಪಾಕಿಸ್ತಾನದ ವರ್ತಕರು ಪ್ರತಿಭಟನೆಗಳನ್ನು ನಡೆಸಿದ್ದರು. ಅದಾದ ನಂತರ ಪಟ್ಟಣದಲ್ಲಿ ಕರಪತ್ರಗಳನ್ನು ಅಂಟಿಸಲಾಗಿದೆ. ಇದನ್ನು ವಿರೋಧಿಸಿ ಹಾಗೂ ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿ ವರ್ತಕರ ಸಂಘದ ಸದಸ್ಯರು ಹಾಗೂ ಬಲೂಚಿಸ್ತಾನ ರಾಷ್ಟ್ರೀಯ ಪಕ್ಷ-ಮೆಂಗಲ್‌ (ಬಿಎನ್‌ಪಿ-ಎಂ) ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಶನಿವಾರವೇ ಪ್ರತಿಭಟನೆ ನಡೆಸಿದ್ದಾರೆ. ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ, ತಾರತಮ್ಯ ಮತ್ತು ಕಿರುಕುಳ ನಿರಂತರವಾಗಿ ಮುಂದುವರಿದಿದೆ. ಅಲ್ಪಸಂಖ್ಯಾತ ಸಮುದಾಯದವರ ಧಾರ್ಮಿಕ ಕೇಂದ್ರಗಳ ಮೇಲೆ ಆಗಾಗ್ಗೆ ದಾಳಿ ಆಗುತ್ತಿರುವುದರಿಂದ ಅವರ ಧಾರ್ಮಿಕ ಸ್ವಾತಂತ್ಯ್ರಕ್ಕೆ ಧಕ್ಕೆಯಾದಂತಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು