News Karnataka Kannada
Wednesday, April 24 2024
Cricket
ವಿದೇಶ

ಬಂಧನ ತಪ್ಪಿಸಲು ಪರಮ್‌ ಬೀರ್‌ ರಿಂದ 10 ಕೋಟಿ ರೂ ಬೇಡಿಕೆ ; ಬುಕ್ಕಿ

Photo Credit :

ಬಂಧನ ತಪ್ಪಿಸಲು  ಪರಮ್‌ ಬೀರ್‌ ರಿಂದ 10 ಕೋಟಿ ರೂ ಬೇಡಿಕೆ ; ಬುಕ್ಕಿ

ಮುಂಬೈ: ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಅವರು ‘ದೊಡ್ಡ ಪ್ರಕರಣ’ದಲ್ಲಿ ಬಂಧನವನ್ನು ತಪ್ಪಿಸಲು ಬಯಸಿದರೆ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಶರ್ಮಾ ಅವರಿಗೆ ₹ 10 ಕೋಟಿಯನ್ನು ನೀಡಬೇಕು ಎಂದು ಕೇಳಿದ್ದಾಗಿ ಕ್ರಿಕೆಟ್ ಬುಕ್ಕಿ ಸೋನು ಜಲಾನ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಮುಂದೆ ಹೇಳಿಕೆ ನೀಡಿದ್ದಾರೆಂದು ಮೂಲಗಳು ಮಂಗಳವಾರ ತಿಳಿಸಿವೆ.
ಈ ಕುರಿತಾದ ಪ್ರತಿಕ್ರಿಯೆಗೆ ಸಿಂಗ್ ಮತ್ತು ಶರ್ಮಾ ಇಬ್ಬರೂ ಲಭ್ಯರಾಗಿಲ್ಲ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಿಂಗ್, ಶರ್ಮಾ, ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಕೋಥ್ಮೈರ್ ಮತ್ತು ಇತರರ ವಿರುದ್ಧ ಜಲಾನ್ ಮಾಡಿರುವ ಸುಲಿಗೆ ಆರೋಪದ ಬಗ್ಗೆ ಮಹಾರಾಷ್ಟ್ರ ಪೊಲೀಸರ ಸಿಐಡಿ ತಂಡ ತನಿಖೆ ನಡೆಸುತ್ತಿದೆ. ಈ ಕುರಿತು ಜಲಾನ್ ಮಹಾರಾಷ್ಟ್ರ ಡಿಜಿಪಿ ಸಂಜಯ್ ಪಾಂಡೆ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದರು, ಅದರ ನಂತರ ಸಿಐಡಿ ತನಿಖೆ ಕೈಗೆತ್ತಿಕೊಂಡಿದೆ.
ಠಾಣೆ ಪೊಲೀಸರ ಸುಲಿಗೆ ವಿರೋಧಿ ಘಟಕದಿಂದ 2018ರ ಮೇನಲ್ಲಿ ನಡೆದ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ನನ್ನನ್ನು ಠಾಣೆ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬಿರ್ ಸಿಂಗ್ ಅವರ ಬಳಿಗೆ ಕರೆದೊಯ್ಯಲಾಯಿತು. ಈ ವೇಳೆ ಸಿಂಗ್ ಭಾರತದಲ್ಲಿ ಕ್ರಿಕೆಟ್ ಬುಕ್ಕಿಗಳ ಬಗ್ಗೆ ಮಾಹಿತಿ ಕೇಳಿದರು ಮತ್ತು ಅವರ ಕುಟುಂಬ ಸದಸ್ಯರು ಸೇರಿ ‘ದೊಡ್ಡ ಪ್ರಕರಣ’ದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಬಂಧನದಿಂದ ತಪ್ಪಿಸಿಕೊಳ್ಳಲು ಬಯಸಿದರೆ, ಜಲನ್ ಪ್ರದೀಪ್ ಶರ್ಮಾ ಅವರಿಗೆ ₹ 10 ಕೋಟಿ ಪಾವತಿಸಬೇಕು ಎಂದು ಸಿಂಗ್ ಹೇಳಿದ್ದಾಗಿ ಜಲಾನ್ ಸಿಐಡಿ ಅಧಿಕಾರಿಗಳಿಗೆ ನೀಡಿದ ತಮ್ಮ ಹೇಳಿಕೆಯಲ್ಲಿ ದೂರಿದ್ದಾರೆ.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಪತ್ತೆಯಾದ ಎಸ್‌ಯುವಿ ವಾಹನದಲ್ಲಿದ್ದ ಸ್ಫೋಟಕ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನಕ್ಕೊಳಗಾದ ನಂತರ ಸಿಂಗ್ ಅವರನ್ನು ಮುಂಬೈ ಪೊಲೀಸ್ ಕಮಿಷನರ್‌ ಹುದ್ದೆಯಿಂದ ಕೆಳಗಿಳಿಸಲಾಯಿತು. ಆ ನಂತರ ಸಿಂಗ್ ಅಂದಿನ ರಾಜ್ಯ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು