News Karnataka Kannada
Thursday, April 18 2024
Cricket
ವಿದೇಶ

ಬಂಗಾಳ ಚುನಾವಣೆ: ರೋಡ್ ಶೋ, ದೊಡ್ಡ ರ್ಯಾಲಿಗಳಿಗೆ ಇಸಿ ನಿಷೇಧ!

Photo Credit :

ಬಂಗಾಳ ಚುನಾವಣೆ:  ರೋಡ್ ಶೋ, ದೊಡ್ಡ ರ್ಯಾಲಿಗಳಿಗೆ ಇಸಿ ನಿಷೇಧ!

ಕೋಲ್ಕತಾ: ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಮಾನದಂಡಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ರೋಡ್ ಶೋ, ಮೆರವಣಿಗೆ ಮತ್ತು ಬೈಕ್ ರ್ಯಾಲಿಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.500 ಜನರ ಮಿತಿಯನ್ನು ಮೀರಿದ ಯಾವುದೇ ಸಾರ್ವಜನಿಕ ಸಭೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಸಮಿತಿ ಹೇಳಿದೆ. ಮತದಾನ ಸಮಿತಿಯು ತನ್ನ ನಡೆಯನ್ನು ವಿವರಿಸುತ್ತಾ, “ಆಯೋಗವು ಚುನಾವಣಾ ಸಭೆಗಳು ಮತ್ತು ಅಭಿಯಾನಗಳ ಹಲವಾರು ನಿದರ್ಶನಗಳನ್ನು ಗಮನಿಸಿದೆ. ಇದರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಕಡೆಗಣಿಸಲಾಗಿದೆ. ಹೀಗಾಗಿ ಇದೀಗ ರೋಡ್ ಶೋ, ಬೃಹತ್ ರ್ಯಾಲಿಗಳಿಗೆ ನಿಷೇದ ಹೇರಿದೆ.
ಬಂಗಾಳ ಚುನಾವಣೆಯಲ್ಲಿ ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುವ ಬಗ್ಗೆ ಕೋಲ್ಕತಾ ಹೈಕೋರ್ಟ್ ಚುನಾವಣಾ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ ಚುನಾವಣಾ ಆಯೋಗ ಈ ಆದೇಶ ಹೊರಡಿಸಿದೆ.ಕೋವಿಡ್ ಮಾನದಂಡಗಳ ಅನುಷ್ಠಾನ ಕುರಿತಂತೆ ಸಲ್ಲಿಕೆಯಾಗಿದ್ದ ಮೂರು ಪಿಐಎಲ್ ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೀಗೆ ಹೇಳಿತು. “ಚುನಾವಣಾ ಆಯೋಗವು ಕಾರ್ಯನಿರ್ವಹಿಸುವ ಅಧಿಕಾರ ಹೊಂದಿದೆ ಆದರೆ ಈ ಕೋವಿಡ್ ಕಾಲದಲ್ಲಿ ಮತದಾನದ ಬಗ್ಗೆ ಏನು ಮಾಡುತ್ತಿದೆ? ಇಸಿ ಕೇವಲ ಸುತ್ತೋಲೆಗಳನ್ನು ಹೊರಡಿಸಿದೆ ಹೊರತು ಅದರ ಮೇಲ್ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಕೋವಿಡ್ ಉಲ್ಪಣವಾಗುತ್ತದೆ ಎಂದು ಎಚ್ಚರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು