News Karnataka Kannada
Saturday, April 20 2024
Cricket
ವಿದೇಶ

ಪ್ರೀತಿಸಿದ್ದಕ್ಕೆ ದಲಿತ ಯುವಕನ ತಲೆಬೋಳಿಸಿ ದೌರ್ಜನ್ಯ

Photo Credit :

ಪ್ರೀತಿಸಿದ್ದಕ್ಕೆ  ದಲಿತ  ಯುವಕನ ತಲೆಬೋಳಿಸಿ ದೌರ್ಜನ್ಯ

ಮಧ್ಯಪ್ರದೇಶ: ಅವರಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವತಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಕುಪಿತಗೊಂಡ ಯುವತಿ ಪಾಲಕರು, ಪ್ರಿಯಕರ ಮತ್ತು ಆತನ ಗೆಳೆಯನನ್ನು ಮನೆಗೆ ಕರೆಸಿಕೊಂಡು ಚಪ್ಪಲಿ ಹಾರ ಹಾಕಿ, ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಬೂಟುಗಾಲನ್ನು ನೆಕ್ಕಿಸಿದ್ದಾರೆ. ತಲೆ ಬೋಳಿಸಿ ಊರು ತುಂಬಾ ಮೆರವಣಿಗೆ ಮಾಡಿದ್ದಾರೆ. ಇಡೀ ಕೃತ್ಯದ ದೃಶ್ಯ ವೈರಲ್​ ಆಗಿದ್ದು, ಅಮಾನವೀಯ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಮೇ 22 ರಂದು ಮಧ್ಯಪ್ರದೇಶ್ ಜಬಲ್ಪುರ ಜಿಲ್ಲೆಯ ಚಾರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ದಮನ್ ಖಮರಿಯಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೇ 30ರಂದು ಅಮಾನವೀಯ ಕೃತ್ಯದ ವಿಡಿಯೋ ವೈರಲ್​ ಆಗಿದೆ. ಪ್ರೇಯಸಿ ಕುಟುಂಬಸ್ಥರಿಂದ ಹಲ್ಲೆಗೊಳಗಾಗಿದ್ದು ದಲಿತ ಯುವಕ ರಾಜ್‌ಕುಮಾರ್ ಮೆಹ್ರಾ(20).
ಈತ ಇದೇ ಗ್ರಾದಮ ಮೇಲ್ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿ ಪಾಲಕರಿಗೆ ಗೊತ್ತಾಗಿದ್ದು, ಪ್ರೀತಿ ಮಾಡದಂತೆ ತಾಕೀತು ಮಾಡಿದ್ದರು. ಪ್ರೇಮಿಗಳಿಬ್ಬರ ಭೇಟಿಗೂ ಯುವತಿ ಕುಟುಂಬಸ್ಥರು ಅಡ್ಡಿಯಾಗಿದ್ದರು. ಮೊಬೈಲ್​ ಕೊಡಿಸುವಂತೆ ಪ್ರಿಯಕರನ ಬಳಿ ಯುವತಿ ಕೇಳಿದ್ದು, ಆತ ತನ್ನ ಸ್ನೇಹಿತನ ಮೂಲಕ ಮೊಬೈಲ್​ ಅನ್ನು ಉಡುಗೊರೆ ಕೊಟ್ಟಿದ್ದ. ಪರಸ್ಪರ ದೂರವಿದ್ದರೂ ಮೊಬೈಲ್​ನಲ್ಲಿ ಪ್ರೇಮಿಗಳ ಮಾತುಕತೆ ಮುಂದುವರಿದಿತ್ತು. ಇದನ್ನ ನೋಡಿದ ಯುವತಿ ತಂದೆ ಸಿಟ್ಟಿಗೆದ್ದು, ಮಗಳ ಪ್ರಿಯಕರ ಮತ್ತು ಆತನ ಸ್ನೇಹಿತ ಇಬ್ಬರನ್ನೂ ಮನೆಗೆ ಕರೆಸಿಕೊಂಡು ದಲಿತ ಯುವಕ ತನ್ನ ಮಗಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಮಾಡಿದ್ದೇ ತಪ್ಪು ಎಂದು ಚಪ್ಪಲಿ ಹಾರ ಹಾಕಿ, ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು